ಬಳ್ಳಾರಿ- ಬಳ್ಳಾರಿಯಲ್ಲಿ ಕೊರೋನಾ ಮಿತಿಮೀರಿತ್ತಿರೋ ಹಿನ್ನಲೆ, ಜಿಂದಾಲ್ ಆವರಣದಲ್ಲಿ ಒಂದು ಸಾವಿರ‌ ಬೆಡ್ ನಿರ್ಮಾಣಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಕುರಿತು ಸ್ಥಳ ಪರಿಶೀಲನೆ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅವರು ಜಿಲ್ಲೆಯ ಕರೋನಾ ನಿಯಂತ್ರಣ ಮಾಡಲು ನಾವೆಲ್ಲಾ ಹಗಲಿರುಳು ಶ್ರಮಿಸುತ್ತಿದ್ದೆವೆ. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ಬೆಡ್ ಸಮಸ್ಯೆ ಆಗದಿರಲಿ ಎನ್ನುವ ಉದ್ದೇಶದಿಂದ ಬೆಡ್ ಸಮಸ್ಯೆ ನಿಗಿಸಲು ಸದ್ಯ 200ಕ್ಕೂ ಹೆಚ್ಚು ಬೆಡ್ ಗಳು ಸಿದ್ಧಗೊಂಡಿವೆ. ಇನ್ನು ಕೆಲವೇ ದಿನಗಳಲ್ಲಿ ಉಳಿದ 800 ಬೆಡ್ ಗಳ ತಾತ್ಕಾಲಿಕ ಆಸ್ಪತ್ರೆ ನಿರ್ಮಾಣ ಆಗಲಿದೆ ಎಂದಿದ್ದಾರೆ. ಈ ಕುರಿತು ಬಳ್ಳಾರಿಯಲ್ಲಿ ಮಾತನಾಡಿದ ಅವರು, ಕೊರೋನಾ ನಿಯಂತ್ರಣಕ್ಕೆ ವೈದ್ಯರು ಸೇರಿದಂತೆ ಇಡೀ ಜಿಲ್ಲಾಡಳಿತ  ಹರಸಾಹಸ ಪಡ್ತಿದೆ, ಒತ್ತಡ ಕಡಿಮೆ ಮಾಡಲು ಜಿಂದಾಲ್ ನಲ್ಲಿ ಆಕ್ಸಿಜನ್ ಪೈಪ್ ಲೈನ್ ಮಾಡಿ ವ್ಯವಸ್ಥೆ ಮಾಡಲಾಗಿದೆ, ಜನರು ಪ್ರಜ್ಞಾವಂತರಾಗಬೇಕು, ಎಲ್ಲಿಯ ವರೆಗೂ ಕರೋನಾ ಬಗ್ಗೆ ಜನರು ಜಾಗ್ರತೆ ವಹಿಸುವುದಿಲ್ಲ ಅಲ್ಲಿಯ ವರೆಗೂ ಕರೋನಾ ನಿಯಂತ್ರಣ ಕಷ್ಟ ಸಾದ್ಯ ಎಂದಿದ್ದಾರೆ, ಇದೇ ವೇಳೆಯಲ್ಲಿ ಸಂಪೂರ್ಣ ಲಾಕ್ ಡೌನ್ ವಿಚಾರದ ಕುರಿತು ತಮ್ಮ ಅಭಿಪ್ರಾಯ ತಿಳಿಸಿದ್ದು,ಒಂದು ಜಿಲ್ಲೆ ಒಂದು ರಾಜ್ಯ ಲಾಕ್ಡೌನ್ ಮಾಡಿದ್ರೆ ಸಮಸ್ಯೆ ಪರಿಹಾರವಾಗ್ತದೆ ಎಂದು ಅನಿಸುತ್ತಿಲ್ಲ, ಎಕ್ಸಪರ್ಟ್ಸ್ ಹೇಳಿದ್ರೇ ಲಾಕ್ಡೌನ್ ಮಾಡಬಹುದು. ಕೇವಲ ಬಳ್ಳಾರಿ ನಗರ  ಲಾಕ್ಡೌನ್ ಮಾಡಿದ್ರೆ ಕೊರೊನಾ ‌ನಿಯಂತ್ರಣವಾಗಲ್ಲ, ಸದ್ಯ ಇರೋದು ಸೆಮಿ ಲಾಕ್ಡೌನ್.. ಪೂರ್ಣ ಪ್ರಮಾಣದ  ಲಾಕ್ಡೌನ್ ಮಾಡಿದ್ರು ಕಷ್ಟ ಮಾಡದೆ ಇದ್ರೂ ಕಷ್ಟ, ಕೊರೊನಾ ಮೂರರಷ್ಟು ಹೆಚ್ಚಾಗ್ತಿದೆ. ಇದನ್ನು ನಿಯಂತ್ರಣ ಮಾಡಲು ಸ್ವಯಂ ನಿರ್ಬಂಧ ಮಾಡೋದೇ ಒಳ್ಳೆಯದು. ಜಾಸ್ತಿ ಟೈಟ್ ಮಾಡಿದ್ರೇ ಪೊಲೀಸರು ಕಿರುಕುಳ ಕೊಡ್ತಾರೆ ಎಂದು ಆರೋಪ ಮಾಡ್ತಾರೆ,ಹೀಗಾದ್ರೇ ಹೇಗೆ ನಿಯಂತ್ರಣ ಮಾಡೋದು ಎಂದಿದ್ದಾರೆ….

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply