ಬಳ್ಳಾರಿ-  ಮಹಿಳೆಯ ಬರ್ಬರ  ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿ ಪೊಲೀಸರು ಬೀಸಿದ್ದ ಬಲೆಗೆ ಬಿದ್ದಿದ್ದಾನೆ.  ಬಳ್ಳಾರಿ ಜಿಲ್ಲೆಯ ಕಂಪ್ಲಿಯ ಎಸ್.ಎನ್.ಪೇಟೆಯ ಮಲ್ಲಿಕಾರ್ಜುನ ದೇವಸ್ಥಾನ ಬಳಿಯಲ್ಲಿ ಫೆ.14 ರಂದು ರಾತ್ರಿ ಸಮಯದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ನಾಗಮ್ಮ ಎಂಬ ಮಹಿಳೆಯನ್ನು ಬರ್ಬರವಾಗಿ ಕೊಲೆಮಾಡಲಾಗಿತ್ತು. ಕೊಲೆ ಮಾಡಿದ ಆರೋಪಿ ಶೇಖರ್ ತಲೆ ಮಾರೆಸಿಕೊಂಡಿದ್ದ .‌ ಕೊಲೆ ಆರೋಪಿ ಸೆರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅವರ ಮಾರ್ಗದರ್ಶನದಲ್ಲಿ ಪೊಲೀಸ್ ತಂಡ ಬಲೆ ಬೀಸಿತ್ತು.

ಆಂಧ್ರಪ್ರದೇಶದ  ಆದೋನಿಯ ಕರಿಯಪ್ಪ ಹಾಸ್ಟೆಲ್ನಲ್ಲಿದ್ದ ಆರೋಪಿ ಶೇಖರನನ್ನು ಪೊಲೀಸರು ಬಂಧಿಸಿ, ಕಂಪ್ಲಿ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ. ಬಳಿಕ ವಿಚಾರಣೆ ನಡೆಸಿದಾಗ ತಾನೇ ಕೊಲೆ ಮಾಡಿರುವುದಾಗಿ ಆರೋಪಿ ಒಪ್ಪಿಕೊಂಡದ್ದಾನೆ. ಇಬ್ಬರ ನಡುವೆ ಅನೈತಿಕ ಸಂಭಂದ ಇದ್ದು.‌ ಇಬ್ಬರ ನಡುವೆ ಜಗಳವಾದ ಹಿನ್ನೆಲೆಯಲ್ಲಿ ನಾಗಮ್ಮಾ ರಾತ್ರಿ ಕಲೆಸ ಮುಗಿಸಿ ಮನಗೆ ತೆರಳುವಾಗ  ಅವಳನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಆರೋಪಿ ಶೇಖರ್ ನನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply