ಅಖಂಡ ಬಳ್ಳಾರಿ ಜಿಲ್ಲಾ ವಿಭಜನೆಯೇ ಆಗಿದ್ದೆ ತಡ ಪಕ್ಕದ ಆಂದ್ರ ಪ್ರದೇಶ ರಾಜಕಾರಣಿಗಳ ಕಣ್ಊ ಈಗ ಗಣಿ ನಾಡು ಬಳ್ಳಾರಿಯ ಮೇಲೆ ಬಿದ್ದಿದೆ. ಹೌದು ಕಳೆದ ಒಂದು ತಿಂಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಬೆಳವಣಿಗೆ ಕಂಡು ಬಂದಿವೆ. ನೂತನ ವಿಜಯನಗರ ಜಿಲ್ಲೆ ರಚನೆಯಾದ ಬೆಣ್ಣಲ್ಲೇ 2023 ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಆಂಧ್ರದ ನಾನಾ ಪಕ್ಷಗಳ ತಯಾರಿ ನಡೆಸಿವೆ ಎನ್ನುವ ಆಘಾತಕಾರಿ ಅಂಶ ಈಗ ಬೆಳಕಿಗೆ ಬಂದಿವೆ.

ಇದರಿಂದಾಗಿ ಬಳ್ಳಾರಿಯಲ್ಲಿ ಮತ್ತಷ್ಟು ತೆಲುಗು ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೇ ಬಳ್ಳಾರಿಯಲ್ಲಿ ಸ್ಪರ್ಧೆ ಮಾಡಲು ಮುಂದಾಗಿದ್ದ ಆಂಧ್ರಪ್ರದೇಶದ ತೆಲುಗು ದೇಶಂ ಪ್ರಾದೇಶಿಕ ಪಕ್ಷ, 2023 ರ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳ ಕಣ್ಣು ಬೀಳುವ ಸಾಧ್ಯತೆ.

ಇನ್ನೂ ಪಕ್ಕದ ಆಂದ್ರಪ್ರದೇಶದ ತೆಲಗು ಭಾಷಿಕರ ಪ್ರಬಲ ಇರುವ ವಿಭಾಜಿತ ಜಿಲ್ಲೆಯ ಐದು ತಾಲೂಕಿನಲ್ಲಿ ಶೇ.51 ತೆಲುಗು ಭಾಷಿಕರು ಇದ್ದಾರೆ ಇದೇ ಕಾರಣಕ್ಕೆ ಬಳ್ಳಾರಿಯಲ್ಲಿ ರಾಜಕೀಯ ಲೆಕ್ಕಾಚಾರ ಗರಿ ಗೆದರಿದಡ. ಕಳೆದ ಒಂದು ವಾರದ ಹಿಂದೆ ಗುಪ್ತ ವಾಗಿ ಆಂದ್ರ ಪ್ರದೇಶದ ಪ್ರದಾಶಿಕ ಪಕ್ಷಗಳು ಸಭೆ ಸಹ ನಡೆಸಿವೆ. ಒಂದು ವೇಳ ಅಖಂಡ ಬಳ್ಳಾರಿ ವಿಭಜನೆಯಿಂದ ಬಳ್ಳಾರಿ, ಸಿರುಗುಪ್ಪ, ಸಂಡೂರು ತಾಲೂಕಿನಲ್ಲಿ ಆಂಧ್ರದ ಪ್ರಾಬಲ್ಯ ಹೆಚ್ಚಾಗುವ ಸಾಧ್ಯತೆ ಇದೆ

Leave A Reply