ಕ್ರೋಧ

0

ಡಾ. ಈಶ್ವರಾನಂದ ಸ್ವಾಮೀಜಿ  

ಕ್ರೋಧವೆಂಬುದು ಮನುಷ್ಯನ ಶತ್ರು. ಅದರ ಮನುಷ್ಯನು ತನ್ನಬುದ್ಧಿ ಕೊಡದೆ ಜಾಗೃತನಾಗಿರಬೇಕು. ಕ್ರೋಧದ ಭರದಲ್ಲಿ ಮನುಷ್ಯನು ಎಂತಹ ಹೇಯ ಕೃತ್ಯಕ್ಕೆ ಕೈಹಾಕಲು ಹಿಂಜರಿಯುವುದಿಲ್ಲ. “ಸಿಟ್ಟು ತನ್ನ ವೈರಿ, ಶಾಂತಿ ಪರರ ವೈರಿ” ಎಂಬ ನಾಣ್ನುಡಿಯಂತೆ ತನ್ನ ಸಿಟ್ಟು ತನ್ನನ್ನೇ ಅಧೋಗತಿಗೆ ಒಯ್ಯುತ್ತದೆ. ಆದುದರಿಂದ ಸಿಟ್ಟಿನ ಕೈಯಲ್ಲಿ ಬುದ್ಧಿ ಕೊಡದೆ, ಸಿಟ್ಟು ಬಂದಾಗ ಒಂದರಿಂದ ನೂರರವರೆಗಿನ ಸಂಖ್ಯೆಯನ್ನು ಎಣಿಸಬೇಕೆಂದು ಅನುಭಾವಿಗಳು ಹೇಳುತ್ತಾರೆ. ಅನೇಕ ಅನುಭಾವಿಗಳ ಅನುಭವದ ಮಾತುಗಳನ್ನು ಮರೆತು ಸಿಟ್ಟಿನ ಕೈಯಲ್ಲಿ ತನ್ನ ಬುದ್ಧಿ ಕೊಟ್ಟು ಸಹನೆಯನ್ನೇ ಕಳೆದುಕೊಂಡಿದ್ದಾನೆ. ಸಾಮಾನ್ಯ ಜನರು ಅದಕ್ಕೆ ಬಲಿಯಾದರೆ ಸಂತರು ಶರಣರು ಅದನ್ನು ಶಮಾದಿ ಷಟ್ಸಂಪತ್ತಿನಿಂದ ಕೋಪವನ್ನು ತಮ್ಮ ಹತೋಟಿಯಲ್ಲಿ ಇಟ್ಟುಕೊಂಡಿರುತ್ತಾರೆ. ಜನಸಾಮಾನ್ಯರು ಸಿಟ್ಟು ತಮ್ಮ ಹಿಡಿತದಲ್ಲಿ ಇಟ್ಟುಕೊಳ್ಳಲು ಅಥವಾ ತಮ್ಮ ಹತೋಟಿಗೆ ತರಲು ಶರಣರ, ಸಂತರ, ದಾಸರ, ಮಹಿಮರ ಸಂಗ ಅವಶ್ಯಕ. ಮಹಾತ್ಮರು ಸಾಮಾನ್ಯ ಜನರಿಗೆ ತಮ್ಮ ತಪಶ್ಶಕ್ತಿಯ ಬಲದಿಂದ ಸಹನೆಯ ಪಾಠವನ್ನು ಭೋದಿಸಿ ಅವರನ್ನು ಉದ್ಧರಿಸುತ್ತಾರೆ.

ಒಂದು ಅರಣ್ಯದಲ್ಲಿ ಒಂದು ಭಯಂಕರವಾದ ಘಟಸರ್ಪ ವಾಸಿಸುತಿತ್ತು. ಅದು ಆ ದಾರಿಗೆ ಹೋಗಿ-ಬರುವ ಜನರನ್ನು ಆಹುತಿ ತೆಗೆದುಕೊಳ್ಳುತಿತ್ತು. ಒಮ್ಮೆ ಆ ದಾರಿಯಿಂದ ಒಬ್ಬ ಮಹಾತ್ಮರು ಬರುವಾಗ ದಾರಿಗೆ ಅಡ್ಡಾಗಿ ಎದುರು ನಿಂತಿತು. ಆದರೆ ಅದೇಕೋ ಹತ್ತಿರ ಹೋಗಲು ಸಾಹಸ ಮಾಡಲಿಲ್ಲ. ಆ ಸರ್ಪ ಮಹಾತ್ಮರಿಗೆ ದಾರಿಕೊಡದೆ ಇದ್ದಾಗ ಅದಕ್ಕೆ “ಎಲೋ! ಸರ್ಪವೇ ನಿನ್ನ ಅನೇಕ ಜನ್ಮದ ಪಾಪದ ಫಲದಿಂದಾಗಿ ಈ ಜನ್ಮದಲ್ಲಿ ಈ ಜನ್ಮದಲ್ಲಿ ನೀನು ಒಂದು ಕ್ರಿಮಿಯಾಗಿ ಜನಿಸಿರುವೆ. ಈ ಜನ್ಮದಲ್ಲಿಯೂ ಅವಿವೇಕದಿಂದ ಎಷ್ಟೋ ಜನರ ಪ್ರಾಣ ಹರಣ ಮಾಡಿ ಪಾಪದ ರಾಶಿಯನ್ನೇ ಕೂಡಿ ಹಾಕಿರುವೆ. ಮುಂದಿನ ಜನ್ಮದಲ್ಲಿ ಎಂತಹ ಜನ್ಮ ಕಾದಿದೆಯೋ ಗೊತ್ತಿಲ್ಲ.” ಅದಕ್ಕೆ ಅವರ ದರ್ಶನ ಹಾಗೂ ಉಪದೇಶದಿಂದ ಜ್ಞಾನ ಉಂಟಾಗಿ ಹಿಂಸೆ ಮಾಡುವ ಕಾರ್ಯವನ್ನು ಬಿಟ್ಟು ಸಾಧು ಜೀವಿಯಾಗಿ ಬಾಳತೊಡಗಿತು. ಅದನ್ನು ಕಂಡ ನೋಡಿದ ಜನರು ಅದಕ್ಕೆ ಹಿಂಸೆ ಕೊಡಲು ಪ್ರಾರಂಭಿಸಿದರು. ಆದರು ಅದು ಸಹಿಸಿಕೊಂಡು ಜೀವನ ಸಾಗಿಸತೊಡಗಿತು. ಹಲವು ವರ್ಷಗಳ ನಂತರ ಅದೇ ಮಹಾತ್ಮರು ಆ ದಾರಿಯಲ್ಲಿ ಬರುವಾಗ ತಾನು ಹಿಂದೆ ಉಪದೇಶ ಮಾಡಲ್ಪಟ್ಟ ಸರ್ಪ ಕಣ್ಣಿಗೆ ಕಂಡಿತು.

ಕೊಬ್ಬಿದ ಸರ್ಪ ನಡೆಯಲು ಬಾರದಂತೆ ಶಕ್ತಿಹೀನವಾಗಿ ಬಿದ್ದಿರುವುದನ್ನು ಕಂಡು ಕೇಳಿದರು. ಅದು ಅವರಿಗೆ ತಮ್ಮ ಉಪದೇಶದ ಫಲವೆಂದಿತು. ಅದಕ್ಕೆ ಅವರು ಮರುಗಿ ಅದಕ್ಕೆ ಮರುಳೆ ಹಿಂಸೆಯಿಂದ ಕೂಡಿದ ಸಿಟ್ಟನ್ನು ಬಿಡು, ತನ್ನ ರಕ್ಷಣೆಗಾಗಿ ಬಳಸುವ ಸಿಟ್ಟನ್ನು ನಾನು ಬಿಡುವೆಂದಿಲ್ಲ, ನಿನ್ನ ಸಮೀಪಕ್ಕೆ ಬಂದವರನ್ನು ಹೆದರಿಸಲು ‘ಭೂಸ್’ ಎನ್ನಲು ಬೇಡವೆಂದಿಲ್ಲ. ಹಿಂಸೆ ಕಾರ್ಯಬಿಟ್ಟು ‘ಭೂಸ್’ ಎಂದು ಕೂಗಿದರೆ ಯಾರು ನಿನ್ನ ಹತ್ತಿರವಗಲಿ, ನಿನಗೆ ಹಿಂಸೆ ಮಾಡುವುದಾಗಲಿ ಮಾಡುವುದಿಲ್ಲ. ನಿನ್ನ ಸಿಟ್ಟು (ಕೋಪ) ನಿನ್ನ ಆತ್ಮ ರಕ್ಷಣೆಗಾಗಿ ಮಾತ್ರವಿರಲಿ, ಇನ್ನೊಬ್ಬ ಹಿಂಸೆಗೆ ಅಲ್ಲವೆಂದು, ಅದರಿಂದ ಯಾವ ಪಾಪ ಬರುವುದಿಲ್ಲವೆಂದು ಉಪದೇಶಿಸಿ ಹೊರಟು ಹೋದರು. ಅದಿಂನಿಂದ ಅವರ ಉಪದೇಶದಂತೆ ಅದನ್ನೇ ಅನಸರಿಸುತ್ತ ಬಂದು ಕೊನೆಗೆ ತನ್ನ ಪ್ರಾಣಬಿಟ್ಟು ಮೋಕ್ಷ ಪಡಿಯಿತು. ಹಾಗೆಯೇ ಮನುಷ್ಯರಾದ ನಾವುಗಳು ನಮ್ಮ ಕ್ರೋಧ ನಮ್ಮ ನಮ್ಮ ಹಿತಕ್ಕಾಗಿ ಇರಬೇಕೆ ವಿನಹ ಇನ್ನೊಬ್ಬರ ಪ್ರಾಣ ಹಾನಿಗಲ್ಲವೆಂದು ಅರಿತು ಬಾಳಿದರೆ ಜೀವನ ಸುಖಾಂತವಾಗುತ್ತದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply