ಮುಂಬೈ-‌  ಬಾಲಿವುಡ್ ಲೋಕವನ್ನು ತಲ್ಲನಗೊಳಿಸಿದ್ದ  ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ನೋವು ಅಭಿಮಾನಿಗಳ ಮನಸ್ಸಿನಿಂದ ಇನ್ನು ಸಹ ಮಾಸಿಲ್ಲಾ . ಆದ್ರೆ ಆ ನೋವು ಮಾಸುವ ಮುನ್ನವೇ ಮತ್ತೊಬ್ಬ ನಟ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬಾಲಿವುಡ್ ಲೋಕವನ್ನು ಬೆಚ್ಚಿಬಿಳಿಸಿದೆ. ಕ್ರಿಕೆಟಿಗ ಎಂ.ಎಸ್.ಧೋನಿ ಜೀವನಾಧಾರಿತ ಸಿನಿಮಾದಲ್ಲಿ  ನಟಿಸಿದ ಮತ್ತೊರ್ವ ನಟ ಸಂದೀಪ್ ನಹಾರ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾರೆ. ಕಳೆದ ಒಂದು ವರ್ಷಗಳಿಂದ ತಮ್ಮ ಪತ್ನಿ ಕಾಂಚನ ಶರ್ಮಾ ಜೊತೆ ಉತ್ತಮ ಸಂಬಂಧ ಹೊಂದಿಲ್ಲ. ಇತ್ತೀಚೆಗೆ ಪತ್ನಿ ಹಾಗೂ ಪತ್ನಿಯ ತಾಯಿ ನನನ್ನು ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಜೀವನದಲ್ಲಿ ಸಾಕಷ್ಟು ನೊಂದಿದ್ದೇನೆ. ಹಲವು ಏರಿಳಿತಗಳನ್ನು ಕಂಡಿದ್ದೇನೆ. ಎಲ್ಲದಕ್ಕೂ  ಆತ್ಮಹತ್ಯೆ ಪರಿಹಾರವಲ್ಲ ಎಂಬುದು ನನಗೆ ಗೊತ್ತಿದೆ.  ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಹಲವು ಭಾರಿ ನಿರ್ಧಾರ ತೆಗೆದುಕೊಂಡಿದ್ದೇನೆ. ಆದರೆ ನನಗೆ ಆತ್ಮಹತ್ಯೆ ಅಲ್ಲದೆ ಬೇರೆ ದಾರಿಗಳೇ ಕಾಣುತ್ತಿಲ್ಲ. ವೈವಾಹಿಕ ಸಂಬಂಧ ಸುಧಾರಿಸಬಹುದು ಎಂಬ ನಿರೀಕ್ಷೆಯಲ್ಲಿ ಇಷ್ಟು ದಿನ ಬದುಕಿದ್ದೆ ಎಂದು ಡೆತ್‌ನೋಟ್‌ನಲ್ಲಿ ಹೇಳಿದ್ದಾರೆ.

ಎಂ.ಎಸ್.ಧೋನಿ ಚಿತ್ರ ಸೇರಿದಂತೆ ಅಕ್ಷಯ್ ಕುಮಾರ್ ಅಭಿನಯದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಸಂದೀಪ್ ನಹಾರ್ ನಟಿಸಿದ್ದಾರೆ. ನಹಾರ್ ಡೆತ್ ನೋಟ್ ಆಧರಿಸಿ ಮುಂಬೈ ಪೊಲೀಸರು ದೂರು ದಾಖಲಿಸಿದ್ದಾರೆ. ಇದೀಗ ತನಿಖೆ ಆರಂಭಿಸಿದ್ದಾರೆ.

About Author

Priya Bot

Leave A Reply