ಮುಂಬೈ- ಅದು ಯಾಕೋ ಚಿತ್ರನಟಿಯರಿಗೆ ಡ್ರಸ್ ಪ್ರಕರಣಗಳು ಮುಳುವಾಗುತ್ತಿವೆ. ರಾಗಿಣಿ ಸಂಜನಾ ಬಳಿಕ ಈಗ ಮತ್ತೊಬ್ಬ ಕನ್ನಡದ ನಟಿ ಡ್ರಗ್ಸ್ ಪ್ರಕರಣದಲ್ಲಿ ಬಂಧನವಾಗಿದೆ. ಮುಂಬೈ ಮೂಲದ ಈ ನಟಿ ಕನ್ನಡದ ರಿಂಗ್ ಮಾಸ್ಟರ್ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ ಶ್ವೇತಾ ಕುಮಾರಿ. ಮುಂಬೈನ  ಎನ್‍ಸಿಬಿ ಅಧಿಕಾರಿಗಳು ಶ್ವೇತಾ ಕುಮಾರಿಯನ್ನಿ ಬಂಧಿಸಿದ್ದಾರೆ. ಡ್ರಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿಯನ್ನು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ನಟಿ ಶ್ವೇತಾ ಕುಮಾರಿ ಅವರಿಗೆ  ಬಂಧನಕ್ಕೂ ಮುನ್ನ ಅಧಿಕಾರಿಗಳು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ್ದರು. ಆದ್ರೆ ವಿಚಾರಣೆಗೆ ಹಾಜರಾಗದ ಕಾರಣ ಅವರ ಮನೆ ಮೇಲೆ ದಾಳಿ ಮಾಡಿ ಅವರನ್ನು ಬಂಧನ ಮಾಡಿದ್ದಾರೆ. ಇನ್ನು  ಕಳೆದ ಒಂದು ವಾರದ ಹಿಂದೆ ಡ್ರಗ್ಸ್ ಫೆಡ್ಲರ್  ಆದ ಚಾಂದ್ ಶೇಖ್ ಎಂಬುವರ ಬಂಧನವಾಗಿತ್ತು. ಚಾಂದ್ ಶೇಖ್ ವಿಚಾರಣೆಯಲ್ಲಿ ಹಲವಾರು ಮಾಹಿತಿ ನೀಡಿದ ಕಾರಣ ಅವರನ್ನು ಬಂಧನ ಮಾಡಲಾಗಿದೆ. ಇನ್ನು‌ಮನೆ ಮೇಲೆ ದಾಳಿ ಮಾಡಿದ ಸಮಯದಲ್ಲಿ ಸುಮಾರು 10 ಲಕ್ಷ ನಗದು ಹಾಗೂ 10 ಗ್ರಾಮ ಮಾದಕ ವಸ್ತುಗಳು ಸಿಕ್ಕಿವೆ….

About Author

Priya Bot

Leave A Reply