ರಾಜಸ್ಥಾನ – ತನನ್ನು ತಾನು ದೇವರ ಅವತಾರ ಪುರುಷ ಎಂದು ಹೇಳಿಕೊಂಡು ಮುಗ್ಧ ಜನರನ್ನು ಮೋಸ ಮಾಡುತಿದ್ದ ಆರೋಪದಲ್ಲಿ ಮತ್ತೊಬ್ಬ ದೇವ ಮಾನವನನ್ನು ರಾಜಸ್ತಾನದ ಜೈಪುರ ಪೊಲೀಸರು ಬಂಧಿಸಿದ್ದಾರೆ. ರಾಜಸ್ಥಾನದ ಜೈಪುರ ನಿವಾಸಿಯಾದ ಯೋಗೇಂದ್ರ ಮೆಹೆತಾ, ತನ್ನನ್ನು ತಾನು ದೇವ ಮಾನವ ಎಂದು ಹೇಳಿ ಜನರನ್ನು ನಂಬಿಸಿ ದೇವರ ಹೆಸರಿನಲ್ಲಿ 2005 ರಿಂದ 200ರ ಅವಧಿಯಲ್ಲಿ ಒಂದೇ ಕುಟುಂಬದ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿದ್ದ.

ಅಲ್ಲದೇ ಇದೇ ರೀತಿಯಲ್ಲಿ ಹೇಳಿ ಮತ್ತೊಬ್ಬ ಮಹಿಳೆಯನ್ನು ಅತ್ಯಾಚಾರ ಮಾಡಿದ್ದ, ಈ ಹಿನ್ನೆಲೆಯಲ್ಲಿ ಸ್ವಯಂಘೋಷಿತ ದೇವಮಾನವ ಯೋಗೇಂದ್ರ ಮೆಹ್ತಾ ಎಂಬಾತನನ್ನು ಜೈಪುರ ಪೊಲಿಸರು ಬಂಧಿಸಿದ್ದಾರೆ. ಆರೋಪಿ ಯೋಗೇಂದ್ರ ಮೆಹ್ತಾ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ ಸುಮಾರು ಮೂರು ವಾರಗಳ ನಂತರ ಪೊಲೀಸರು ಆರೋಪಿಯನ್ನು ಮಂಳವಾರ ಬಂಧಿಸಿದ್ದಾರೆ. ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿ ಈ ಸ್ವಯಂಘೋಷಿತ ದೇವಮಾನವ ಮೆಹ್ತಾ (56) ವಿಸ್ತಾರವಾದ ಆಶ್ರಮವನ್ನು ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply