ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಅರ್ಜಿ ನಮೂನೆಯ 2ರ ಕ್ಯಾತೆ ಮತ್ತೆ ಶುರುವಾಗಿದೆ.‌ ಈ ದಿನ ಮಹಾನಗರ ಪಾಲಿಕೆ ಆಯುಕ್ತೆ ಕಚೇರಿಗೆ ಸಾರ್ವಜನಿಕರ ಮುತ್ತಿಗೆ ಹಾಕುವ ಮುಖೇನ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದೊಂದು ವರ್ಷದಿಂದ ಅರ್ಜಿ ನಮೂನೆ 2 ಅನ್ನ  ನೀಡದೇ ಸತಾಯಿಸುತ್ತಿರುವ ಪಾಲಿಕೆ ಸಿಬ್ಬಂದಿಯ ವಿರುದ್ಧ ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಲ್ಲದೇ ಪಾಲಿಕೆ ಆಯುಕ್ತೆ ಪ್ರೀತಿ  ಗೆಹ್ಲೋಟಿ ಅವರ ಕಚೇರಿಗೂ ನುಗ್ಗಿ ತಮ್ಮ‌ ಅಸಮಾಧಾನವನ್ನ ವ್ಯಕ್ತಪಡಿಸಿದ್ದಾರೆ. ಯಾರು ಲಂಚ ನೀಡುತ್ತಾರೋ ಅವರಿಗೆ ಮಾತ್ರ ಫಾರ್ಮ್ ನಂ- 2 ನೀಡ್ತಾರೆ.‌ ಪಾಲಿಕೆ ಆಯುಕ್ತರ ಗಮನ ಸೆಳೆದ್ರೂ ಕೂಡ ನಮ್ಮ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸಾರ್ವಜನಿಕರು.

ಪಾಲಿಕೆ ಅಧಿಕಾರಿಗಳು ಮಾತಿಗೆ ಮಣಿಯದ ಹಿನ್ನಲೆ ಮಹಾನಗರ ಪಾಲಿಕೆ ಆಯುಕ್ತೆ ಕಚೇರಿಗೆ ಮುತ್ತಿಗೆ ಹಾಕಿದ ಬಳ್ಳಾರಿ ನಾಗರೀಕರು. ಗೊಂದಲದ ಗೂಡಾದ ಮಹಾನಗರ ಪಾಲಿಕೆ ಈ ಹಿಂದೆ ಇದ್ದ ಆಯುಕ್ತೆ ತುಷಾರಮಣಿ ಭ್ರಷ್ಟಾಚಾರ ಆರೋಪದಡಿ ಅಮಾನತ್ತುಗೊಂಡಿದ್ರು.‌ ಅವರನಂತರ ಬಂದ ಪ್ರೀತಿ ಗೆಹ್ಲೋಟ್ ಕಾಲಾವಾಧಿಯಲ್ಲಿಯೂ ಭ್ರಷ್ಟಾಚಾರ ವ್ಯಾಪಕವಾಗಿದೆ ಎಂದು ನಾಗರೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ಟಿ.ಎಸ್.ಲ್ಯಾಂಡ್ ಗೆ ಫಾರ್ಮ್ ನಂ – 2 ನೀಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About Author

Priya Bot

Leave A Reply