ಬೀದರ- ಕರೋನಾ ಮಾಹಾ ಮಾರಿ ಸೋಂಕಿಗು ತುತ್ತಾಗಿ ಗಂಭೀರ ಪ್ರಮಾಣದಲ್ಲಿ ಶ್ವಾಸಕೋಶದಲ್ಲಿ ಹಾಣಿ ಆಗಿದ್ದರೆ ಅವರಿಗೆ ರೆಮಿಡಿಸಿವರ್ ಔಷಧ ಒಂದು ರೀತಿಯಲ್ಲಿ ಸಂಜೀವಿನಿ ಹಾಗೆ ಕೆಲಸ ಮಾಡುತ್ತಿದೆ. ಹೀಗಾಗಿ ಈ ಔಷಧೀಗೆ ಭಾರಿ ಬೇಡಿಕೆ ಬಂದಿದ್ದು, ಈ ಔಷಧಿಯನ್ನು ಕೆಲವರು ಕಳ್ಳಸಾಗಣೆ ಮಾಡುತ್ತಿದ್ದಾರೆ.‌ ಬೀದರ್ ನ ಕಾಳಸಂತೆಯಲ್ಲಿ ರೆಮಿಡಿಸಿವರ್ ಅಕ್ರಮವಾಗಿ ಮಾರಾಟ‌ ಮಾಡುತ್ತಿದ್ದ ಇಬ್ಬರು ಆರೋಪಿಗಳ ಪೊಲೀಸರು ಬಂಧನ ಮಾಡಿದ್ದಾರೆ. ಬಂಧಿತ ಆರೋಪಗಳನ್ನು ಶೇಖ್ ಅಬ್ದುಲ್ಲಾ ಹಾಗೂ ಮಹ್ಮದ ವಾಸೀಮ್ ಎಂದು ಗುರುತಿಸಲಾಗಿದೆ. ಶೇಖ್ ಅಬ್ದುಲ್ಲಾ ಅವರು ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಸುತ್ತಿದ್ದು, ಇತನ ಸಂಪರ್ಕದಲ್ಲಿ ಇದ್ದ ಮತ್ತೊಬ್ಬನಾದ ಮಹ್ಮದ ವಾಸೀಮ್ ಅವರನ್ನು ಬಂಧನ ಮಾಡಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರ ಠಾಣೆಯ ಪೊಲೀಸರು ದಾಳಿ ಮಾಡಿ ರೆಮಿಡಿಸಿವರ್ ಅಕ್ರಮ ಮಾರಾಟ ಮಾಡುತ್ತಿದ್ದ ವೇಳೆಯಲ್ಲಿ ಇಬ್ಬರನ್ನು  ಪೊಲೀಸರು ಬಂಧನ ಮಾಡಿದ್ದಾರೆ. ಈ ಇಬ್ಬರು ಆರೋಪಿಗಳು ಕೊರೋನಾ ಪೀಡಿತರಿಗೆ 20 ರಿಂದ 25 ಸಾವಿರಕ್ಕೆ ರೆಮಿಡಿಸಿವರ್ ಮಾರಾಟ‌ ಮಾಡುತ್ತಿದ್ದ ವೇಳೆ‌ ಬಂಧನ ಮಾಡಲಾಗಿದ್ದು, ಈ ಸಂಬಂಧ ಬೀದರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply