ಹುಬ್ಬಳ್ಳಿ-ಕಸ ತುಂಬುವ ಟಿಪ್ಪರ್ ಗಳ ಬ್ಯಾಟರಿ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಕರಣ ದಾಖಲಾದ ಆರು ಗಂಟೆಯಲ್ಲಿ ಕಳ್ಳನನ್ನು ಬಂಧಿಸಿವಲ್ಲಿ  ಕಸಬಾಪೇಟೆ ಠಾಣೆ ಪೋಲಿಸರು ಯಶಸ್ವಿಯಾಗಿದ್ದಾರೆ. ಪ್ರಭು ಹನಮಂತ ಕ್ಯಾರಕಟ್ಟಿ ಬಂಧಿತ ಆರೋಪಿ.ಬಂಧಿತ, ಕಾರ್ಪೊರೇಷನ್ ಕಸ ತುಂಬುವ ವಾಹನದ ಚಾಲಕನಾಗಿದ್ದು, ಅನ್ನ ಹಾಕಿದ ಮನೆಗೇ ಕನ್ನ ಹಾಕಿದ ಅರೆಸ್ಟ್ ಆಗಿದ್ದಾನೆ.

ವಲಯ ಕಚೇರಿ 11ರ ಆವರಣದಲ್ಲಿ ನಿಲ್ಲಿಸಲಾಗಿದ್ದ ಪಾಲಿಕೆಯ ಕಸ ತುಂಬುವ ವಾಹನಗಳ ಬ್ಯಾಟರಿ ಕಳ್ಳತನವಾಗಿದ್ದವು. ಸುಮಾರು ಒಂಬತ್ತು ವಾಹನಗಳ ಬ್ಯಾಟರಿ ಕಳ್ಳತನ ಮಾಡಲಾಗಿತ್ತು.ಈ ಕುರಿತು ಕಸಬಾಪೇಟೆ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಆರು ಗಂಟೆಯಲ್ಲಿಯೇ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

About Author

Priya Bot

Leave A Reply