ಅರವಿಂದ ಮತ್ತು ದಿವ್ಯಾ ಮಧ್ಯ ಮನಸ್ತಾಪ

0

ಬೆಂಗಳೂರು –  ಬಿಗ್ ಬಾಸ್ ಎರಡನೇ ಇನಿಂಗ್ಸ್ ಆರಂಭದ ನಂತರ ಎಲ್ಲ ಸ್ಪರ್ಧಿಗಳು ತುಂಬಾ ಉತ್ಸಾಹದಿಂದ ಆಟವನ್ನು ಆಡುತ್ತಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮನಃ ಸ್ಥಾಪ ಹೆಚ್ಚಾಗುತ್ತಲೇ ಇದೆ.

ವಾರದ ಮೊದಲ ದಿನದ ಟಾಸ್ಕನಲ್ಲಿ ಅರವಿಂದ್ ನಿಧಿ ಅವರಿಗೆ ಹೇಳಿದ ಮಾತು ದಿವ್ಯಾ ಉರುಡುಗ ಅವರಿಗೆ ಇಷ್ಡವಾಗಲಿಲ್ಲಾ.  ಆ ಜಾಗದಲ್ಲಿ ನಾನು ಇದ್ದರು ಕೂಡಾ ಆ ಮಾತನ್ನು ನಾನೂ ಸ್ವೀಕರಿಸುತ್ತಿರಲಿಲ್ಲ ಎಂದು ದಿವ್ಯಾ ಉರುಡುಗ ಅರವಿಂದ್ ಅವರ ಮೇಲೆ ಬೇಸರ ವ್ಯಕ್ತ ಪಡಿಸಿದ್ದಾರೆ. ವಾರದ ಮೊದಲ ದಿನದ ಟಾಸ್ಕ್ ನಲ್ಲಿ ಎರಡು ಟಿಮ್ ನ ಕ್ಯಾಪ್ಟನ್ ಆದಂತಹ ಅರವಿಂದ್ ಮತ್ತು ಮಂಜು ಪಾವಗಡ ಅವರು ಆಟಕ್ಕೆ ಸಂಭಂದ ಪಟ್ಟಂತೆ ಮಾತನಾಡುತ್ತಿರುವಾಗ ನಿಧಿ ಅವರು ಮಧ್ಯ ಬಾಯಿ ಹಾಕುತ್ತಾರೆ, ಆ ಸಮಯದಲ್ಲಿ ಅರವಿಂದ್ ನಿಧಿ ಅವರಿಗೆ ನೀನು ಮುಚಕೊಂಡಿರು ನಾವು ಕ್ಯಾಪ್ಟನ್ಸ್ ಮಾತನಾಡುತ್ತಿದ್ದೆವೆ ಎಂದು ಹೇಳಿರುತ್ತಾರೆ.

ನಿನ್ನೆ ಬಿಗ್ ಬಾಸ್ ಮನೆಯಲ್ಲಿ ಸೂರ್ಯಸೇನೆ ತಂಡ ಹೆಚ್ಚು ಪೌಲ್ ಗಳನ್ನು ಮಾಡಿದ ಕಾರಣಕ್ಕೆ ಆಟದಲ್ಲಿ ಸೋಲನ್ನು ಕಂಡಿತು. ಆಟದ ಸಮಯದಲ್ಲಿ ಆಟದ ನಿಯಮವನ್ನು ದಿವ್ಯಾ ಉರುಡುಗ ಅವರೂ ವಿವರಿಸುತ್ತಲೇ ಇದ್ದರು, ಆದರೆ ಯಾರೂ ಅವರ ಮಾತು ಕೇಳಲಿಲ್ಲ. ಹೀಗಾಗಿ ಆಟದಲ್ಲಿ ಗೆಲ್ಲುವ  ಅವಕಾಶವನ್ನು ತಾವಾಗಿಯೇ ಕಳೆದುಕೊಂಡೆವೂ ಎಂದು ಅವರು ಬೇಸರದಲ್ಲಿ ಇದ್ದರು. ತಮ್ಮ ಬೇಸರವನ್ನು ಮನೆಯ ತಮ್ಮ ಟೀಮ್ ನ ಸದಸ್ಯರಲ್ಲಿ ಹೇಳುವಾಗ ನಿಧಿ ಅವರಿಗೆ, ಅರವಿಂದ್ ಅಂದಿರುವ ಮಾತನ್ನು ನಾನು ಕೂಡಾ ಒಪ್ಪಲ್ಲ ಎಂದು ಕಟ್ಟು ನಿಟ್ಟಾಗಿ ಹೇಳಿದರು. ದಿವ್ಯಾ ಅವರ ಈ ಮಾತನ್ನು ಹೇಳಿ ಅರವಿಂದ್ ಕಣ್ಣಲ್ಲಿ ನೀರು ಹಾಕಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply