ರಾಂಚಿ – ಅನಾರೋಗ್ಯದ ಹಿನ್ನೆಲೆಯಲ್ಲಿ ರಜೆ ಕೇಳಿದರೂ ರಜೆ‌ ನೀಡದ ಹಿನ್ನೆಲೆಯಲ್ಲಿ ರೋಗಿ ಒಬ್ಬರು ಆಕ್ಸಿಜನ್ ಸಿಲಿಂಡರಿನ ಜೊತೆಯಲ್ಲಿ ಕೆಲಸಕ್ಕೆ ಹಾಜರಾಗಿರುವ ಘಟನೆ ರಾಂಚಿಯಲ್ಲಿ ನಡೆದಿದೆ.  ಜಾರ್ಖಂಡ್ ನ ಬೊಕೊರಾದ ಸೆಕ್ಟರ್ 4ರಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಈ ಘಟನೆ ನಡೆದಿದೆ.

ಅರವಿಂದ್ ಕುಮಾರ್ ಆಕ್ಸಿಜನ್ ಸಿಲಿಂಡರ್ ಜೊತೆಯಲ್ಲಿ ಬ್ಯಾಂಕಿಗೆ ಬಂದ ನೌಕರ ಎಂದು ಗುರುತಿಸಲಾಗಿದ್ದು.  ಕಳೆದ ಕೆಲ ದಿನಗಳ ಹಿಂದೆ ಅರವಿಂದ್ ಅವರಿಗೆ ಕೊರೊನಾ ಸೋಂಕು ತಗುಲಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು, ಬಳಿಕ ಕೋವಿಡ್ ವರದಿ ಸಹ ನೆಗೆಟಿವ ಬಂದಿತ್ತು, ಆದ್ರೆ ಕರೋನಾ ನೆಗೆಟಿವ್ ಇದ್ದರೂ ಉಸಿರಾಟದ ಸಮಸ್ಯೆ ಮಾತ್ರ ಹಾಗೆ ಇತ್ತು.

ಹೀಗಾಗಿ ಅರವಿಂದ್ ಅವರು ಮನೆಯಲ್ಲಿ ಸಹ ಆಕ್ಸಿಜನ್ ಸಪೋರ್ಟ್ ನಿಂದ ಉಸಿರಾಟ ಮಾಡುತಿದ್ದರು. ಆದ್ರೆ ಬ್ಯಾಂಕ್ ಮ್ಯಾನೇಜರ್ ಮಾತ್ರ ಕೆಲಸಕ್ಲೆ ಹಾಜರಾಗಲೇ ಬೇಕು ಎಂದು ಉಪಟಳ ಇಟ್ಟಿದ್ದರು‌. ಇದರಿಂದ ಬೇಸತ್ತ ಅರವಿಂದ್ ಅವರು , ಸಿಲಿಂಡರ್ ಜೊತೆಯಲ್ಲಿ ಬ್ಯಾಕ್ ಕೆಲಸಕ್ಕೆ ಹಾಜರಾಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply