ಪ.ಬಂ- ಪಶ್ಚಿಮ ಬಂಗಾಳದಲ್ಲಿ ಸದ್ಯ ನಡೆಯುತ್ತಿರುವ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿರುವ ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಬಂಗಾಳದಲ್ಲಿ ಚುನಾವಣೆಗೆ ನಿಲ್ಲುವುದಾಗಿ ತಿಳಿಸಿದ್ದಾರೆ.  ಬಂಗಾಳ ಚುನಾವಣಾ ಹಿನ್ನಲೆಯಲ್ಲಿ ಅಲ್ಲಿನ ರಾಜಕೀಯ ಬೆಳವಣಿಗೆಯನ್ನು ಗಮನಿಸುತ್ತಿರುವ ಅವರು ತಮ್ಮ ಪಕ್ಷವು ಮುಂಬರುವ ರಾಜ್ಯ ಚುನಾವಣೆಯಲ್ಲಿ ಅಬ್ಬಾಸ್ ಸಿದ್ದಿಕಿ ಅವರೊಂದಿಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಅತೀ ಹೆಚ್ಚಿನ ಸಂಖ್ಯಯಲ್ಲಿ ಮುಸ್ಲಿ ಮತದಾರರಿದ್ದು ಕಳೆದ ಚುನಾವಣೆ ವೇಳೆಯಲ್ಲಿ  ಬಹುತೇಕ ಮುಸ್ಮಿ ಮತದಾರರು ಮತದಾನದಿಂದ ದೂರ ಉಳಿದಿದ್ದರು. ಇದೇ ಕಾರಣಕ್ಕೆ ಅಸದುದ್ದೀನ್ ಕಣ್ಣು ಬಂಗಾಳದ ಮೇಲೆ ಬಿದ್ದಿದೆ. ಇದರ ರಾಜಕೀಯ ಲಾಭ ಪಡೆಯಲು ಅಸದುದ್ದೀನ್ ಮುಂದಾಗಿದ್ದಾರೆ.  ಇದೇ ಕಾರಣಕ್ಕೆ ಗುಪ್ತವಾಗಿ ಬಂಗಾಳದ ಪ್ರಮುಖ ಮುಸ್ಲಿಂ ಮುಖಂಡರನ್ನು ಬೇಟಿ ಮಾಡಿದ್ದಾರೆ. ಅಲ್ಲದೇ ಮುಸ್ಲಿಂ ಮುಖಂಡ ಅಬ್ಬಾಸ್ ಸಿದ್ದಿಕಿ ಅವರೊಂದಿಗೆ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಬಂಗಾಳದ ಹೂಗ್ಲಿ ಜಿಲ್ಲೆಯ ಫ್ಯೂಚುರಾ ಷರೀಫ್‌ನಲ್ಲಿ ಸಿದ್ದಿಕಿ ಅವರನ್ನು ಗುಪ್ತವಾಗಿ  ಭೇಟಿಯಾದ ಓವೈಸಿ, ಯಾವ ಜಿಲ್ಲೆಗಳು ಮತ್ತು ಎಷ್ಟು ಸ್ಥಾನಗಳಲ್ಲಿ ಎಐಎಂಐಎಂ ಸ್ಪರ್ಧಿಸಲಿದೆ ಎಂದು ಶೀಘ್ರದಲ್ಲೇ ನಿರ್ಧರಿಸುತ್ತೇನೆ ಎಂದಿದ್ದಾರೆ. ಪಶ್ಚಿಮ ಬಂಗಾಳ 2021 ರ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆಗೆ ನಡೆಯಲಿದೆ…

About Author

Priya Bot

Leave A Reply