ಹೈದ್ರಾಬಾದ್ – ಕರೋನಾದಿಂದ ಮನೆಯಲ್ಲಿಯೇ ಉಳಿದಿದ್ದ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು, ಇತ್ತೀಚೆಗಷ್ಟೇ ಸಿನಿಮಾ ಶೂಟಿಂಗ್ ಗೆ ತೆರಳಿದ್ದಾರೆ. ‘ಸರ್ಕಾರು ವಾರಿ ಪಾಠ’ ಸಿನಿಮಾದಲ್ಲಿ ಬ್ಯುಸಿ ಯಾಗಿರುವ ಮಹೇಶ್ ಬಾಬು ಅವರಿಗೆ ಅವಕಾಶಗಳು ಸಾಕಷ್ಟು ಕೈ ಬೀಸಿ ಕರೆಯುತ್ತಿವೆ. ಇತ್ತೀಚೆಗಷ್ಟೇ ಸಿನಿಮಾ ಶೂಟಿಂಗ್ ಆರಂಭವಾದರು . ‘ಸರ್ಕಾರು ವಾರಿ ಪಾಠ’ ಚಿತ್ರದ ಬಿಡುಗಡೆಯ ದಿನಾಂಕವನ್ನು ಈಗಾಗಲೇ ಚಿತ್ರತಂಡ ನಿಗದಿ ಮಾಡಿದೆ.
ಕಳೆದ ಸಂಕ್ರಾಂತಿಗೆ ಅಂದರೆ 2020 ರ ಸಂಕ್ರಾಂತಿಗೆ ಮಹೇಶ್ ಬಾಬು ಅಭಿನಯದ ಸರಿಲೇರು ನಿಕ್ಕೆವರು ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಈಗ ಅದೇ ರೀತಿ . ‘ಸರ್ಕಾರು ವಾರಿ ಪಾಠ’ ಚಿತ್ರವನ್ನು ಕೂಡಾ ಮುಂದಿನ ಸಂಕ್ರಾಂತಿಗೆ ಅಂದರೆ 2022 ರ ಸಂಕ್ರಾಂತಿಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಮಾಹಿತಿ ನೀಡಿದೆ.
ಖ್ಯಾತ ಹಿಟ್ ನಿರ್ದೇಶಕಿ ಸುಧಾ ಕೊಂಗರ ಅವರ ನಿರ್ದೇಶಿಸುವ ಸಿನಿಮಾಗೆ ಪ್ರಿನ್ಸ್ ಮಹೇಶ್ ಬಾಬು ನಾಕಯರಾಗಲಿದ್ದಾರೆ. ಆದರೆ ಮಹೇಶ್ ಬಾಬು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿರುವುದರಿಂದ ಅವರೊಂದಿಗಿನ ಸಿನಿಮಾ ಯಾವಾಗಾ ಆರಂಭವಾಗುವುದು ಎಂದು ಕಾದು ನೋಡಬೆಕಿದೆ. ಸುಧಾ ಕೊಂಗರ ಅವರು ನಿರ್ದೇಶಿಸಿದ ‘ಸೂರರೈ ಪೊಟ್ರು’ ಚಿತ್ರ ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಹೊಂದಿ ಸಾಕಷ್ಟು ಸದ್ದು ಮಾಡಿತು. ಅಲ್ಲಿಂದ ಸುಧಾ ಕೊಂಗರ ಅವರ ಅವಕಾಶದ ಬಾಗಿಲು ತೆರೆಯಿತು. ಇನ್ನು ರಾಜಮೌಳಿ ನಿರ್ದೇಶನದ ಸಿನಿಮಾದಲ್ಲಿ ಕೂಡಾ ಮಹೇಶ್ ಬಾಬು ನಟಿಸಲಿದ್ದಾರೆ.