ಬಿ,ಎಸ್,ವೈಯವರು ಇಳಿ ವಯಸ್ಸಿನಲ್ಲಿ ಒಳ್ಳೆಯ ಕೆಲಸ  ಮಾಡುತ್ತಿದ್ದಾರೆ : ರಂಭಾಪುರಿ ಪೀಠದ ಜಗದ್ಗುರು ಶ್ರೀ

0

ರಾಯಚೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಿಎಂ ಸ್ಥಾನದ ಬದಲಾವಣೆ ಮಾಡಿದ್ದರೆ ಬಿಜೆಪಿ ಬಹುದೊಡ್ಡ ಪರಿಣಾಮ ಬೀರಲಿದೆ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠ ಜಗದ್ಗುರು ಶ್ರೀ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

ರಾಯಚೂರಿನ ಕಿಲ್ಲೇ ಬೃಹ್ನಮಠದದಲ್ಲಿ ಮಾಧ್ಯಮದೊವರಿಂದಗೆ ಮಾತನಾಡಿದ ಜಗದ್ಗುರುಗಳು, ರಾಜಕೀಯ ಕ್ಷೇತ್ರ ಎನ್ನುವುದು ಸಂಘರ್ಷವಿದ್ದಂತೆ, ಅಧಿಕಾರಕ್ಕೆ ವಿಚಾರಕ್ಕೆ ಬಿ.ಎಸ್.ಯಡಿಯೂರಪ್ಪನವರ ಸಿಎಂ ಸ್ಥಾನಕ್ಕೆ ಹೆಚ್ಚುಕಡಿಮೆಯಾದ್ರೆ, ಭಾರತೀಯ ಜನತಾ ಪಾರ್ಟಿಗೆ ಬಹುದೊಡ್ಡದಾದ ಪರಿಣಾಮ ಬೀರಲಿದೆ.

ಬಿ,ಎಸ್,ವೈಯವರು ಇಳಿ ವಯಸ್ಸಿನಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದು, ಎಲ್ಲಾ ಜಾತಿ ಜನಾಂಗದವರು ಬೆಂಬಲಿಸಿ ಕಾಣುತ್ತೇವೆ. ಸರ್ಕಾರಕ್ಕೆ ಅಧಿಕಾರಕ್ಕೆ ಬಂದ್ಮೇಲೆ ನೆರೆ ಹಾವಳಿ ಅಪ್ಪಳಿಸಿತ್ತು. ಅದ್ಮೇಲೆ ಕೋವಿಡ್ ಆವರಿಸಿತ್ತು. ಇದು ಎಲ್ಲಾವನ್ನ ತಮ್ಮ ಇಳಿ ವಯಸ್ಸಿನಲ್ಲಿ ತಮ್ಮ ಸಚಿವ ಸಂಪುಟದೊಂದಿಗೆ ಸಮರ್ಥವಾಗಿ ಕೆಲಸ ನಿಭಾಯಿಸಿದ್ದಾರೆ.

ಹೀಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಸಿಎಂ ಬಿ.ಎಸ್.ಯಡಿಯೂರಪ್ಪನವರನ್ನು ಅಧಿಕಾರ ಅವಧಿಯವರೆಗೆ ಮುಂದುವರೆಸುವ ವಿಶ್ವಾಸವಿದೆ. ಬಿಎಸ್ ವೈ ಯವರಿಗೆ ಸುತ್ತುರು ಶ್ರೀಗಳು, ಆದಿಚುಂನಗಿರಿ ಸೇರಿದಂತೆ ಹಲವು ಮಠಾಧೀಶಯರು ಬೆಂಬಲಿಸಿದ್ದಾರೆ. ಅವರು ಅವಧಿಯಲ್ಲಿ ಮಠ, ಮಂದೀರ, ಮಸೀದಿಗಳು, ಚರ್ಚೆಗಳ ಅಭಿವೃದ್ದಿಗಾಗಿ ಅನುದಾನ ಸಹ ನೀಡುವ ಮೂಲಕ ಜನಪರ ನಾಯಕರಾಗಿದ್ದಾರೆ. ಸದ್ಯ ನಮ್ಮಗೆ ವಿಶ್ವಾಸವಿದೆ ಎಂದು ಹೇಳಿದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply