ಬಾಗಲಕೋಟೆಯಲ್ಲಿ ವಿಚಿತ್ರ ಲವ್ ಕಹಾನಿ

0

ಬಾಗಲಕೋಟೆ  – ಮೊದಲೇ ಮದುವೆಯಾಗಿದ್ದರೂ ಪ್ರೀತಿಸಿದ ಯುವಕನ ಜೋತೆಗೆ ಓಡಿ ಹೋಗಿದ್ದ ಯುವತಿ ನೇಣು ಬಿಗಿದುಕೊಂಡ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟೆ ಜಿಲ್ಲೆಯ ಇಲಕಲ್ ತಾಲೂಕಿನ ಕೆಲೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಕೆಲೂರು ಗ್ರಾಮದ  ಬಸಮ್ಮಾ ಎಂಬ ಯುವತಿ ಗಂಡನನ್ನ ಬಿಟ್ಟು ಬಂದು, ಪ್ರೀತಿಸಿದ್ದ ಹುಡುಗನ ಜೊತೆ ಎರಡನೇಯ‌ ಮದುವೆಯಾಗಿದ್ದಳು.

೨೦ ವರ್ಷದ ಬಸ್ಸಮ್ಮ ಮಾದರ್ ಎಂಬ ಯುವತಿ ತೋಟದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾಳೆ. ಬಸಮ್ಮಳನ್ನ ಕಳೆದ ನಾಲ್ಕು ತಿಂಗಳ ಹಿಂದೆ ಗದಗ ಜಿಲ್ಲೆಯ ರೋಣ ತಾಲೂಕಿನ  ಶಾಂತಗಿರಿ ಗ್ರಾಮದ ವ್ಯಕ್ತಿಯೋರ್ವನಿಗೆ ಕೊಟ್ಟು‌ ಮದುವೆ ಮಾಡಲಾಗಿತ್ತು. ಆದ್ರೆ ಇತ್ತೀಚಗೆ ಕೆಲ ದಿನಗಳಿಂದ ಬಸಮ್ಮ ಗಂಡನನ್ನ ಬಿಟ್ಟು, ಕೆಲೂರು ಗ್ರಾಮದಲ್ಲಿ ವಾಸವಾಗಿದ್ಳು.

ಆದ್ರೆ ಮೊದಲು ಪ್ರೀತಿ ಮಾಡಿದ ರಂಜಿತ್ ಪಂಚನ್ನವರ್ ಎಂಬುವ ಯುವಕನ ಜೊತೆ ಮರು ಸಂಪರ್ಕ ಹೊಂದಿದ್ದಳು. ಆದ್ರೆ  ಕೆಲ ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ರಂಜೀತ್ ಜೊತೆ ಮದುವೆಯಾಗಿದ್ದಳು. ಸಧ್ಯ ಆ ಯುವತಿ ಬಸಮ್ಮ ತಮ್ಮ ತೋಟದ ಮನೆಯಲ್ಲಿ ನೇಣಿಗೆ ಶಾರಣಾಗಿದ್ದಾಳೆ. ಈ ವಿಷಯ ತಿಳಿದು ರಂಜೀತ್ ಮನೆಯವ್ರು ದಿಢೀರ್ ಎಸ್ಕೇಪ್ ಆಗಿದ್ರು. ಇದ್ರಿಂದ ಕುಪಿತಗೊಂಡ ಯುವತಿ ಮನೆಯವ್ರು ರಂಜೀತ್ ಮನೆಯ ರಂಜೀತ್ ಮನೆಗೆ ಬೆಂಮಕಿ ಹಚ್ಚಿದ್ದಾರೆ.

ರಂಜೀತ್ ಪಂಚನ್ನವರ ಮನೆ ಸುಟ್ಟು ಕರಕಲಾಗಿದೆ. ಈ ಕುರಿತು ಎರಡೂ ಕಡೆ ಪ್ರಕರಣಾ ದಾಕಲಿಸಿಕೊಂಡ ಅಮೀಗಢ ಪೊಲೀಸರು, ಹತ್ತಕ್ಕು ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply