ಬ್ಯಾರಿ ಅಕಾಡೆಮಿ ವತಿಯಿಂದ ‘ಬ್ಯಾರಿ ಪಾಲುಂ ತೇನ್ 2021’ ಬ್ಯಾರಿ ಸಂಗೀತ ಕಾರ್ಯಕ್ರಮ

0

ಮಂಗಳೂರು – ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಬ್ಯಾರಿ ಸಂಗೀತ ಕಲಾವಿದರ ಒಕ್ಕೂಟ ಇದರ ಸಹಕಾರದಲ್ಲಿ ಜುಲೈ 10 ರ ಶನಿವಾರದಂದು ರಾತ್ರಿ  ಗಂಟೆ 7 ರಿಂದ 10 ಗಂಟೆಯವರೆಗೆ ‘ಬ್ಯಾರಿ ಪಾಲುಂ ತೇನ್ 2021’ ಬ್ಯಾರಿ ಸಂಗೀತ ಲೈವ್ ಕಾರ್ಯಕ್ರಮ ನಡೆಯಲಿದೆ. ಅನೇಕ ಬ್ಯಾರಿ ಧ್ವನಿ ಸುರುಳಿಗಳಲ್ಲಿ ಹಾಡಿ ನಮ್ಮ ಮನಸ್ಸನ್ನು ಗೆದ್ದ, ಕಳೆದ ವರ್ಷವಷ್ಟೆ ನಮ್ಮನ್ನಗಲಿದ ಹೆಸರಾಂತ ಬಹುಭಾಷಾ ಗಾಯಕ ಮರ್ಹೂಮ್ ಶರೀಫ್ ಬೆಳ್ಳಾರೆಯವರ ಸ್ಮರಣಾರ್ಥ ‘ಬ್ಯಾರಿ ಪಾಲುಂ ತೇನ್ 2021’ ಬ್ಯಾರಿ ಸಂಗೀತ ಲೈವ್ ಕಾರ್ಯಕ್ರಮವನ್ನು  ಅಕಾಡೆಮಿಯ ಯುಟ್ಯೂಬ್ ಮತ್ತು ಫೇಸ್ ಬುಕ್ ಚಾನೆಲ್ ಮುಖಾಂತರ ಪ್ರಸಾರ ಮಾಡಲಿದೆ.

ಬ್ಯಾರಿ ಭಾಷೆಯ ಪ್ರಸಿದ್ದ ಗಾಯಕರಾದ  ಸಮೀರ್ ಮುಲ್ಕಿ, ಇಬ್ರಾಹಿಂ ಬಾತಿಷಾ, ಮಲ್ಲಿಕಾ ಶೆಟ್ಟಿ, ಸಮದ್ ಗಡಿಯಾರ್, ಅಬ್ದುಲ್ ಸಮದ್ ಕಾಟಿಪಳ್ಳ ಇವರು ಭಾಗವಹಿಸಲಿದ್ದಾರೆ. ಕೋರೋನದ ಸಂಕಷ್ಟದ ಸಮಯದಲ್ಲಿ ಕಲಾಪ್ರಿಯರಿಗೆ ಅವಕಾಶವಾಗುವಂತೆ ಸರಕಾರದ ನಿಯಮಾನುಸಾರ ಕೋರೋನದ ಮುಂಜಾಗ್ರತ ಕ್ರಮವನ್ನು ಪಾಲನೆ ಮಾಡಿಕೊಂಡು ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು  ಅಕಾಡೆಮಿ ಅಧ್ಯಕ್ಷರಾದ ರಹೀಂ ಉಚ್ಚಿಲ್ ರವರು ತಿಳಿಸಿದ್ದಾರೆ.  ಕಾರ್ಯಕ್ರಮದ ಸದಸ್ಯ ಸಂಚಾಲಕರಾಗಿ ಅಕಾಡೆಮಿಯ ಸದಸ್ಯರಾದ ಶಂಶೀರ್ ಬುಡೋಳಿ ಇವರು ಕಾರ್ಯನಿರ್ವಹಿಸಲಿದ್ದಾರೆ. ಆಸಕ್ತರು ಈ ಕಾರ್ಯಕ್ರಮವನ್ನು ಮನೆಯಲ್ಲಿ ಕುಳಿತು ವೀಕ್ಷಿಸಬೇಕಾಗಿ ಬ್ಯಾರಿ ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply