ಹೊಲ ಉಳುಮೆ ಮಾಡಿದ ಬಸವರಾಜ ಹೊರಟ್ಟಿ

0

ಹುಬ್ಬಳ್ಳಿ – ಲಾಕ್ ಡೌನ್ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಉಳುಮೆಯಲ್ಲಿ  ಬಿಜಿಯಾಗಿದ್ದಾರೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಕೃಷಿ ಕಾಯಕದಲ್ಲಿ ತೊಡಗಿಕೊಂಡು ಗಮನ ಸೆಳೆದಿದ್ದಾರೆ. ಹುಬ್ಬಳ್ಳಿ ತಾಲೂಕಿನ ಛಬ್ಬಿ ಬಳಿ ಇರೋ ನಿಸಗ೯ ತೋಟದಲ್ಲಿ ಉಳುಮೆ ಮಾಡಿದರು. ಬಸವರಾಜ ಹೊರಟ್ಟಿ ಟ್ರಾಕ್ಟರ್ ನಿಂದ ಹೊಲ ಉಳುಮೆ ಮಾಡಿದರು.  ಹಲವು ದಿನಗಳ ಹಿಂದೆಯಷ್ಟೇ ಕೋವಿಡ್ ಸೋಂಕಿಗೆ ತುತ್ತಾಗಿದ್ದ ಬವರಾಜ ಹೊರಟ್ಟಿ, ಚಿಕಿತ್ಸೆ ಪಡೆದುಕೊಂಡಿದ್ದರು.

ಕೋವಿಡ್ ನಿಂದ ಗುಣಮುಖಗೊಂಡ ನಂತರ ಲಾಕ್ ಡೌನ್ ವೇಳೆಯಲ್ಲಿ ಕೃಷಿ ಕಾಯಕದಲ್ಲಿ ತೊಡಗಿ ಗಮನ ಸೆಳೆದಿದ್ದಾರೆ. ಹೊರಟ್ಟಿ ಮುಂಗಾರು ಬಿತ್ತನೆಗೆ ಟ್ರ್ಯಾಕ್ಟರ್ ಮೂಲಕ ಹೊಲವನ್ನು ಹದ ಮಾಡಿದ್ದಾರೆ. ಸದಾ ನೆಹರೂ ಜುಬ್ಬಾ ಧರಿಸುತ್ತಿದ್ದ ಹೊರಟ್ಟಿ ಟೀ ಶರ್ಟ್ ಧರಿಸಿ ಕೃಷಿ ಉಳುಮೆಯಲ್ಲಿ ತೊಡಗೋ ಮೂಲಕ ಗಮನ ಸೆಳೆದಿದ್ದಾರೆ. ಕೃಷಿ ಕಾಯಕದಲ್ಲಿಯೂ ಸಭಾಪತಿ ಸೈ ಅನಿಸಿಕೊಂಡಿದ್ದಾರೆ. ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿ, ವಿಧಾನ ಪರಿಷತ್ ಸಭಾಪತಿಗಳಾಗಿರೋ ಹೊರಟ್ಟಿ ಅವರ ಕೃಷಿ ಪ್ರೀತಿಗೆ ಅಭಿಮಾನಿಗಳ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply