ನಡೆ-ನುಡಿ ಒಂದಾಗಿರಲಿ

0

ಡಾ. ಈಶ್ವರಾನಂದ ಸ್ವಾಮೀಜಿ

ನಾವು ನಮ್ಮ ಅಲ್ಪ ಸುಖಕ್ಕಾಗಿ ನಮ್ಮನ್ನು ನವು ಮರೆತು ನಡೆ-ನುಡಿಗಳಿಂದ ವಂಚಿತರಾಗುತಿದ್ದೇವೆ. ಓದಿನಿಂದ ಕೇವಲ ಜ್ಞಾನ ಮಾತ್ರ ದೊರೆಯಬಹುದು. ಆದರೆ ಆ ಜ್ಞಾನೋಪದೇಶದಂತೆ ನಡೆಯುವುದು ನಮ್ಮ ಕರ್ತವ್ಯ ಅಲ್ಲವೇ? ಅದನ್ನು ಬಿಟ್ಟು ನೈಜತೆಗಿಂತ ಅಥವಾ ಸಾಂಪ್ರದಾಯಕ್ಕಿಂತ ಕೃತ್ರಿಮ ಬದುಕನ್ನೇ ಆಶ್ರಯಿಸಿದ್ದೇವೆ.

ನೂರನೋದಿ ನೂರು ಕೇಳಿದರೇನು
ಆಶೆ ಹರಿಯದು ರೋಷ ಬಿಡದು
ಮಜ್ಜನಕ್ಕೇರೆದು ಫಲವೇನು
ಮಾತಿನಂತೆ ಮನವಿಲ್ಲದ
ಜಾತಿ ಡೊಂಬರ ನೋಡಿ
ನಗುವ ನಮ್ಮ ಕೂಡಲ ಸಂಗಮದೇವ.

ಮಾತು-ಮನ, ನಡೆ-ನುಡಿಗಳ ನಡುವೆ ಡೊಂಬರಾಟದಂತೆ ನಾವು ಬದುಕತಿದ್ದೇವೆ. ಆಡಂಬರದ ಜೀವನ, ಕಷ್ಟಪಡದೆ ಶ್ರೀಮಂತನಾಗಬೇಕು, ಅರ್ಹತೆಯಿಲ್ಲದೆ ಅಧಿಕಾರ ಪಡೆಯಬೇಕು ಮೊದಲಾದ ಆಶೆ-ಆಮಿಷಗಳನ್ನು ಬಯಸುತ್ತ ನಿಜವಾದ ಜೀವನದ ಪರಮ ಧ್ಯೇಯ ಮರೆತು ಮಾನವರಾದ ನಾವು ವಾನರ ಆಗುತಿದ್ದೇವೆ.
ಸಾಂಪ್ರದಾಯಕ್ಕೊಂದು ಮಾರ್ಗವಾದರೆ, ನಮಗೊಂದು ಮಾರ್ಗ ಎಂದು ಬದುಕುತ್ತಿರುವ ನಮಗೆ ದೇವರ ದಾಸಿಮಾರ್ಯ ಬಸವಾದಿ ಶರಣರು ಅರಿತು ಅನುಭವಿಸಿ ಉಪದೇಶಿಸಿದ ವಚನಾಮೃತ ನಮಗೆ ಅವಶ್ಯವಾಗಿದೆ.

ಒಡಲುಗೊಂಡವ ಹಸಿವ ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು ನೀನೆನ್ನ ಜಡಿದೊಮ್ಮೆ ನುಡಿಯದಿರಾ
ನೀನೆನ್ನಂತೊಮ್ಮೆ ಒಡಲುಗೊಂಡು ನೋಡಾ ರಾಮನಾಥ.
ದೇಹದಾರಿಯಾದ ನಮ್ಮ ನಡೆ-ನುಡಿಗಳಲ್ಲಿ ವ್ಯತ್ಯಾಸವಿರುವುದು ಸಹಜ. ಅದು ತಿದ್ದಿಕೊಂಡು ಹೋಗುವದು ನಮ್ಮ ಪರಮ ಧ್ಯೇಯವಾಗಬೇಕು. ಆಗ ನಮ್ಮ ನುಡಿ ಶಿವನುಡಿ, ನಮ್ಮ ನಡೆ ಶಿವನ ನಡೆಯಗುವದು.

ನುಡಿದರೆ ಮುತ್ತಿನ ಹಾರದಂತಿರಬೇಕು,
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು,
ನುಡಿದರೆ ಸ್ಪಟಿಕದ ಸಲಾಕೆಯಂತಿರಬೇಕು,
ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು,
ನುಡಿಯೊಳಗಾಗಿ ನಡೆಯದಿರ್ದೊಡೆ
ಕೂಡಲ ಸಂಗಮದೇವನೆಂತೋಲಿವನಯ್ಯ?

ನಡೆ-ನುಡಿಗಳು ಒಂದಾಗಿದ್ದರೆ ಎಲ್ಲಿಯಾದರೂ ಗೌರವ ಸಿಗುತ್ತದೆ. ಆದರೆ ಆ ಗೌರವ, ಸನ್ಮಾನಕ್ಕಾಗಿ ನಡೆ-ನುಡಿಗಳಲ್ಲಿ ನಟನೆ ಇರಬಾರದು. ಇದರಿಂದ ನಮ್ಮ ವ್ಯಕ್ತಿತ್ವಕ್ಕೆ ನಾವೇ ಕಲಂಕ ತಂದುಕೊಳ್ಳುತ್ತೇವೆ. ನಾವಾಡುವ ಮಾತಿನ ಬಗ್ಗೆ ನಮಗೆ ಅರಿವಿರಬೇಕು. ಅವು ಇನ್ನೊಬ್ಬರ ಮನ ನೋಯಿಸುವಂತಿದ್ದರೆ ಏನು ಪ್ರಯೋಜನ? ನಮ್ಮ ನುಡಿ ಮುತ್ತಾಗಿರಬೇಕು. ಮಾಣಿಕ್ಯವಾಗಿರಬೇಕು. ಅದು ಜಗಬೆಳಗುವ ಜ್ಯೋತಿಯಾಗಬೇಕು.
ನಮ್ಮ ನಡೆ-ನುಡಿ ಮಗುವಿನ ನಡೆ-ನುಡಿಯಾಗಬೇಕು. ಮಗುವಿನ ನುಡಿ ಯಾರಿಗೆ ಬೇಡ? ಮಿತ್ರನಿಗೂ ಶತ್ರುವಿಗೂ ಬೇಕು. ಅವನಾಡುವ ಮಾತು ತೊದಲಾದರೂ ಎಲ್ಲರಿಗೂ ಹಿತ. ಸಂತೋಷವನ್ನುಂಟು ಮಾಡುತ್ತದೆ. ಅವನಲ್ಲಿ ಆಶೆ-ಆಮಿಷಗಳಿಲ್ಲ. ಕಾಮಾ-ಕ್ರೋಧಾದಿಗಳ ಸೊಂಕು ಇಲ್ಲ. ಬಡವ-ಬಲ್ಲಿದ ಎಂಬ ಬೇಧವಿಲ್ಲ. ಮಾನ-ಸನ್ಮಾನಗಳ ಬಯಕೆ ಇಲ್ಲ. ಇಂತಹ ನಡೆ-ನುಡಿ ನಮ್ಮದಾದರೆ ಜಗವಂದ್ಯರಾಗುವೇವು.

ಲಕ್ಷ್ಮೀರ್ವಸತಿ ಜಿವ್ಹಾಗ್ರೇ, ಜಿವ್ಹಾಗ್ರೇ ಮಿತ್ರಬಾಂಧವಾಃ |
ಜಿವ್ಹಾಗ್ರೇ ಬಂಧನಂ ಪ್ರಾಪ್ತಂ, ಜಿವ್ಹಾಗ್ರೇ ಮರಣಂ ದ್ರುವಮ್ ||

ಒಬ್ಬ ಯುವಕ ಕುರಿಗಳನ್ನು ತಗೆದುಕೊಂಡು ಊರಿನ ಆಚೆ ಇರುವ ಬೆಟ್ಟಕ್ಕೆ ಮೇಯಿಸಲು ದಿನಾಲು ಹೊಗುತ್ತಿದ್ದನು. ಒಮ್ಮೆ ಅವನ ಮನದಲ್ಲಿ “ತೋಳ ಬಂತು, ತೋಳ ಬಂತು” ಎಂದು ಅನಿಸಿ ಕೂಗಿದನು. ಜನರು ಬರ್ತಾರೋ ಇಲ್ಲವೋ ನೊಡೋಣ ಎಂದು ಮತ್ತೆ ಜೊರಾಗಿ ಕೂಗತೊಡಗಿದ. ಆಗ ಜನರು ಕೈಯಲ್ಲಿ ಕೊಲು ಹಿಡಿದುಕೊಂಡು ಓಡೋಡಿ ಈ ಯುವಕನ ಹತ್ತಿರ ಬಂದು ಕೇಳಿದರು. ಅವನು ತಾನು ಸುಮ್ಮನೆ ತಮಾಸೆಗೆ ಸುಳ್ಳು ಹೇಳಿದೆ ಎನ್ನುವನು. ಬಂದ ಜನರು ಯುವಕನಿಕೆ ಛಿಮಾರಿ ಹಾಕಿ ಹೋದರು. ಆದರೆ ಇನ್ನೊಮ್ಮೆ ನಿಜವಾಗಿ ತೋಳುಗಳ ಗುಂಪು ಬಂದು ಸುತ್ತು ಹಾಕಿ ಒಂದೊಂದು ಕುರಿಯನ್ನು ತಿನ್ನುತ್ತ ಸಾಗಿದವು. ಆಗ ಆ ಯುವಕ ತೋಳ ಬಂದಾವೆ ಎಂದು ಕೂಗಿದಾಗ ಜನರು ಆ ಯುವಕ ಮೊದಲಿನಂತೆ ಸುಳ್ಳು ಹೇಳಿರಬಹುದು ಎಂದು ತಿಳಿದು ಒಬ್ಬರೂ ಬರಲಿಲ್ಲ.

ಆದ್ದರಿಂದ ನಡೆ-ನುಡಿಗಳು ಒಂದಾಗಿದ್ದು, ನುಡಿವಾಗ ಅರಿವಿನಿಂದ ಮಾತನಾಡಬೇಕು. ಇಲ್ಲವೇ ಈ ಯುವಕನ ಕುರಿಗಳನ್ನು ಕಳೆದುಕೊಂಡಂತೆ ನಮ್ಮ ಜೀವನ ವ್ಯರ್ಥವಾಗುತ್ತದೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply