ಕಲಬುರಗಿ- ಕಲಬುರಗಿ ನಗರದ ಸಾರ್ವಜನಿಕರು ನೀರು ಹಾಗೂ ಒಳಚರಂಡಿ ಕರವನ್ನು ಪ್ರತಿ ತಿಂಗಳು ತಪ್ಪದೇ ನಿಗದಿತ ಅವಧಿಯೊಳಗಾಗಿ ಪಾವತಿಸಬೇಕು. ಇಲ್ಲದಿದ್ದಲ್ಲಿ ಯಾವುದೇ ಮೂನ್ಸೂಚನೆಯಿಲ್ಲದೇ ನೀರು ಹಾಗೂ ಒಳಚರಂಡಿ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಲಬುರಗಿ ನಿರ್ವಹಣೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

ನಗರದ ಸಾರ್ವಜನಿಕರು ನೀರು, ಒಳಚರಂಡಿಯ ಚಾಲ್ತಿ ಕರ ಹಾಗೂ ಬಾಕಿಯಿರುವ ಕರವನ್ನು ತಪ್ಪದೇ ಪಾವತಿಸಬೇಕು. ಗ್ರಾಹಕರ ಅನುಕೂಲಕ್ಕಾಗಿ ಮಂಡಳಿಯು ನೀರು, ಒಳಚರಂಡಿ ಕರವನ್ನು ಪಾವತಿಸಲು ವಿಭಾಗವಾರು ಕರ ವಸೂಲಿಗಾರರನ್ನು ನೇಮಿಸಲಾಗಿದೆ. ಮನೆಗೆ ಬರುವ ಕರವಸೂಲಿಗಾರರಿಗೆ ಕರವನ್ನು ಪಾವತಿಸಿ ಸಹಕರಿಸಬೇಕು.

ಇದಲ್ಲದೇ ಸಾರ್ವಜನಿಕರ ಅನುಕೂಲಕ್ಕಾಗಿ ಕಲಬುರಗಿ ನಗರದ ಸೂಪರ ಮಾರ್ಕೇಟ್, ಶಹಾಬಜಾರ್, ಪಿ ಆಂಡ್ ಟಿ ಕಾಲೋನಿ, ಖಾದ್ರಿ ಚೌಕ್ ಹಾಗೂ ರಫೀಕ್ ಚೌಕ್‍ಗಳಲ್ಲಿ ಕರವನ್ನು ಪಾವತಿಸಲು ಕೌಂಟರ್‍ಗಳನ್ನು  ತೆರೆಯಲಾಗಿದ್ದು, ಈ ಕೌಂಟರ್‍ಗಳಲ್ಲಿ ಕರವನ್ನು ಪಾವತಿಸಬಹುದಾಗಿದೆ.

About Author

Priya Bot

Leave A Reply