ಬಳ್ಳಾರಿ- ಬಹಿರ್ದೆಸೆಗೆ ಹೋಗಿಬರುತ್ತಿದ್ದವರ ಮೇಲೆ ಕರಡಿಯೊಂದು ದಾಳಿ ನಡೆಸಿದ ಪರಿಣಾಮ ಇಬ್ಬರಿಗೆ ತೀವ್ರ ಗಾಯವಾಗಿರುವ ಘಟನೆ ಇಂದು ಬೆಳಿಗ್ಗೆ 7-30ಗಂಟೆಗೆ ಕೆರೆಕಾವಲರಹಟ್ಟಿಯ ಹೊರವಲಯದ ಕೂಡ್ಲಿಗಿ ಕೆರೆ ಸಮೀಪ ಜರುಗಿದೆ. ಕೆರೆ ಕಾವಲರಹಟ್ಟಿಯ ನಾಗರಾಜ (27) ಹಾಗೂ ಸಂಡೂರಿನ ಎನ್. ವೆಂಕಟೇಶ (52) ಗಾಯಗೊಂಡವರಾಗಿದ್ದು ಕೂಡ್ಲಿಗಿ ಆಸ್ಪತ್ರೇಲಿ ಚಿಕಿತ್ಸೆ ಪಡೆದುಕೊಂಡು ಹೆಚ್ಚಿನ ಚಿಕಿತ್ಸೆಗೆ ತೀವ್ರ ಗಾಯಗೊಂಡ ನಾಗರಾಜನನ್ನು ಬಳ್ಳಾರಿ ವಿಮ್ಸ್ ಗೆ ಕಳುಹಿಸಲಾಗಿದೆ.

ಇಂದು ಬೆಳಿಗ್ಗೆ ಕೆರೆಕಾವಲರಹಟ್ಟಿಯ ಹೊರವಲಯದ ಕೂಡ್ಲಿಗಿ ದೊಡ್ಡಕೆರೆಕಡೆಗೆ ಬಹಿರ್ದೆಸೆಗೆ ಹೋಗಿ ಬರುತ್ತಿದ್ದ ನಾಗರಾಜನ ಮೇಲೆ ಕರಡಿ ದಾಳಿ ನಡೆಸಿದ್ದು ತಕ್ಷಣ ಬೋರಲಾಗಿ ಮಲಗಿದ್ದರಿಂದ ತಲೆಗೆ ಉಗುರಿನಿಂದ ಪರಚಿ ಗಾಯಗೊಳಿಸಿದೆ  ಅದೇ ಸಮಯಕ್ಕೆ ನಿನ್ನೆ ಆಂಜನೇಯ ಸ್ವಾಮಿ ಕಾರ್ತಿಕಕ್ಕೆ ಸಂಡೂರಿನಿಂದ ಬಂದಿದ್ದ ವೆಂಕಟೇಶನು ಬಹಿರ್ದೆಸೆಗೆ ಹೋಗುತ್ತಿದ್ದ ಆತನ ಮೇಲೆ ಸಹ ದಾಳಿ ನಡೆಸಿದ್ದು ಅದರಿಂದ ತಪ್ಪಿಸಿಕೊಂಡರು ತಲೆಗೆ ಸ್ವಲ್ಪ ಪರಚಿ ಗಾಯಗೊಳಿಸಿದೆ ತಕ್ಷಣ ಗ್ರಾಮದ ಜನತೆ ಬರುತ್ತಿದ್ದಂತೆ ಕರಡಿ ಕೆರೆಭಾಗದ ಕಡೆಗೆ ಓಡಿಹೋಗಿದೆ ಎಂದು ಗಾಯಾಳು ವೆಂಕಟೇಶ  ತಿಳಿಸಿದರು. ಸುದ್ದಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಮಾಹಿತಿ ಪಡೆದುಕೊಂಡಿದ್ದಾರೆ.

About Author

Priya Bot

Leave A Reply