ಬೆಂಗಳೂರ – ಕಳೆದ ಒಂದು ವಾರದಿಂದ ಹಯಾಗಿ ಕಲ ಕಳೆದ ಬಿಗ್ ಬಾಸ್ ಮನೆ ಮಂದಿಯಲ್ಲಿ ಇಂದು ಕಾದಟ್ಟಕ್ಕೆ ನಿಂತಿದ್ರು.‌ ಮನೆಯಲ್ಲಿ

ಇಂದು ಗಲಾಟೆ ಅಲ್ಲಲ್ಲಿ ಬೀಪ್ ಸೌಂಡ್ ಹೆಚ್ಚಾಗಿತ್ತು. ಹೌದು ಕನ್ನಡದ ಹೆಸರಾಂತ ರಿಯಾಲಿಟಿ ಶೋ ನಲ್ಲಿ  ಬಿಗ್ ಬಾಸ್ ಮನೆಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮನೆ ಮಂದಿಯಲ್ಲಿ ಎರಡು ತಂಡಗಳಾಗಿದೆ , ಅಷ್ಟಕ್ಕೂ ಇದಕೆಲ್ಲಾ ಕಾರಣ ಬಿಗ್  ಬಾಸ್ ನೀಡಿದ್ದ ಟಾಸ್ಕ್. ಬಿಗ್ ಬಾಸ್ ಇಂದು ಕರೋನಾ ಹಾವಳಿಯನ್ನು ಬಳಸಿಕೊಂಡಿದ್ದು, ಮನೆಯ ಸದಸ್ಯರನ್ನು ಎರಡು ತಂಡವಾಗಿ ಮಾಡಿದ್ದು, ಕೊರೋನಾ ವೈರಸ್ ಹಾವಳಿಯನ್ನೇ ಬಿಗ್ ಬಾಸ್ ಟಾಸ್ಕ್ ಆಗಿಸಿಕೊಂಡಿದ್ದರು. ಮಾನವರ ತಂಡಕ್ಕೆ ಲ್ಯಾಗ್ ಮಂಜ ನಾಯಕನಾದರೆ, ವೈರಸ್ ಗಳ ತಂಡಕ್ಕೆ ಪ್ರಶಾಂತ ಸಂಬರಗಿ ನಾಯಕರಾಗಿದ್ದರು.  ಈ ದಿನದ ಆಟವನ್ನು ವೈರಸ್ ತಂಡ ಗೆದ್ದುಕೊಂಡಿತು. ಮೊದಲು ಮಾನವರ ತಂಡದ ಗೀತಾ ಭಟ್ ವೈರಸ್ ದಾಳಿಗೊಳಗಾದರು.

ಗೇಮ್ ಯಾವ ಹಂತಕ್ಕೆ ಬಿಸಿ ಪಡೆದುಕೊಂಡಿತ್ತು ಅಂದರೆ ಬಿಗ್ ಬಾಸ್ ಮನೆಯಲ್ಲಿ ಬೀಪ್ ಮೇಲೆ ಬೀಪ್ ಸೌಂಡ್ ಗಳು ಬಂದವು. ಗೇಮ್ ರೂಲ್ಸ್ ನಲ್ಲಿ ಇದ್ದ ಕೆಲವು ಗೊಂದಲಗಳು ಮನೆಯವರನ್ನು ದಂಗು ಬಡಿಸಿದ್ದವು. ಒಂದು ಹಂತಕ್ಕೆ ಪ್ರಶಂತ್ ಸಂಬರಿಗಿ ಹಾಗೂ ಶಮಂತ್ ನಡುವೆ ಮಾತಿನ ಚಕಮಕಿ ಆಯಿತು. ಬಳಿಕ ಇದಕ್ಕೆ ಸಾತ್ ನೀಡಿದ್ದು ಅರವಿಂದ್, ಅರವಿಂದ ಸಹ ಪ್ರಶಾಂತ ಸಂಬರಿಗಿ ಅವರ ಜೊತೆಯಲ್ಲಿ ಜಗಳಕ್ಕೆ ಇಳಿದ್ರು. ಬಳಿಕ ಊಟ ಮಾಡವಾಗಲೂ ಮನೆ ಮಂದಿಯಲ್ಲಿ ಅಲಲ್ಲಿ ಗುಸುಗುಸು ಪಿಸುಪಿಸು ಮಾತು ಜೋರಾಗಿತ್ತು. ಇನ್ನು ರಾತ್ರಿ ಮಲಗುವಾಗಲೂ ಸಹ ಮನೆಯಲ್ಲಿ ಒಂದಿಷ್ಟು ಜನ ಮಲಗಿದ್ರೆ ಇನ್ನುಳಿದವರು ಗಾರ್ಡನ್ ಏರಿಯಾದಲ್ಲಿ ಮಲಗ ಬೇಕಾಯಿತು…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply