ಬಳ್ಳಾರಿ-ಬಳ್ಳಾರಿ ಜಿಲ್ಲೆಯ ವಿಭನೆಯನ್ನು ಖಂಡಿಸಿ ಈಗಾಗಲೇ ನಾನಾ ಪರ ಸಂಘಟನೆಗಳು ಹೋರಾಟವನ್ನು ನಡೆಸುತ್ತವೆ. ಆದರೆ ಸರ್ಕಾರ ಮಾತ್ರ ಇದರ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ,  ಆದರೂ ನಗರದಲ್ಲಿ ಬಳ್ಳಾರಿ ವಿಭಜನೆಯನ್ನು ಖಂಡಿಸಿ, ಜಿಲ್ಲಾ ಹೋರಾಟ ಸಮಿತಿ ಕೈಗೊಂಡಿರುವ ಧರನಿಯೂ 19 ದಿನವನ್ನು ಪೊರೈಸಿವೆ. ಜಿಲ್ಲೆಯ ಡಿ ಸಿ ಕಛೇರಿಯ ಮುಂದೆ ಧರನಿಯನ್ನು ಕೈಗೊಂಡಿರುವ ಪ್ರತಿಭಟನಾಕಾರರು ಸರ್ಕಾರಕ್ಕೆ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಪ್ರತಿ ದಿನವು ಒಂದೊಂದು ಸಂಘಟನೆ ಪ್ರತಿಭಟನೆಯ ಹೊನೆ ಹೊತ್ತದ್ದು, ಇಂದಿನ ಧರನಿಯನ್ನು ಕೊಂಚ ವಿಭಿನ್ನವಾಗಿ ಕೈಗೊಂಡಿದ್ದಾರೆ,  ರಾಜಕಾರಣೀಗಳ ಅಣುಕು ಶವ ಮೆರವನಿಗೆ ಮಾಡುವ ಮೂಲಕ ತಮ್ಮ ಆಕ್ರೋಶ  ಹೊರ ಹಾಕಿದ್ದಾರೆ.

ಬಳ್ಳಾರಿ ವಿಭಜನೆಗೆ ಸರ್ಕಾರ ಮುಂದಾಗಿದೆ. ಇದರ ಕಾರಣ ಈಗ ಆಂಧ್ರದ ಕಣ್ಣು ಬಳ್ಳಾರಿಯ ಮೇಲೆ  ಬಿದ್ದಿದೆ, ಹೀಗಿರುವಾಗ ವಿಭಜನೆ ಸರಿಯಲ್ಲ ಎಂಬುವುದು ಹೋರಾಟಗಾರರ ವಾದವಾಗಿದೆ. ಇದರಿಂದ ಗಡಿ ಸಮಸ್ಯೆಯನ್ನು ಹುಟ್ಟಿಹಾಕಿದಂತಾಗುತ್ತದೆ ಎನ್ನುತ್ತಾರೆ ಹೋರಾಟಗಾರರು. ಅಲ್ಲದೇ ಜಿಲ್ಲೆಯಲ್ಲಿ ಗಟಾನು ಗಟಿ ರಾಜಕೀಯ ನಾಯಕರಿದ್ದರು ಪ್ರಟಿಭಟನೆಗೆ ಜಿಲ್ಲಾ ವಿಭಜನೆನ್ನು ವಿರೋಧ ಮಾಡುತ್ತಿಲ್ಲ. ಹೀಗಾಗಿ ಸ್ಥಳಿಯ ರಾಜಕಾರಣಿಗಳು ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Leave A Reply