ಬಳ್ಳಾರಿ- ಅಖಂಡ ಬಳ್ಳಾರಿ ವಿಭಜನೆ ಖಂಡಿಸಿ ನಡೆಯುತ್ತಿರುವ ಹೋರಾಟ 23 ನೇ ದಿನಕ್ಕೆ ಕಾಲಿಟ್ಟಿದೆ. ಕಳೆದ 23 ದಿನಗಳಿಂದ ಒಂದೊಂದು ದಿನ ಒಂದೊಂದು ಸಂಘಟನೆ ಹೋರಾಟಕ್ಕೆ ಧುಮುಕಿವೆ ಇಂದು , ಅಖಂಡ ಬಳ್ಳಾರಿ ಜಿಲ್ಲೆ ಹೋರಾಟ ಸಮಿತಿ ಹಮ್ಮಿಕೊಂಡಿರುವ ಈ ಹೋರಾಟಕ್ಕೆ ಬಳ್ಳಾರಿ ಜಿಲ್ಲಾ ವೀರಶೈವ ಜಂಗಮ ಅರ್ಚಕರ ಮತ್ತು ಪುರೋಹಿತರ ಸಂಘ ಹೋರಾಟ ಮಾಡಿದೆ. ಕಳೆದ 23 ದಿನಗಳಿಂದ ನಡೆಯುತ್ತಿರುವ ಹೋರಾಟದಲ್ಲಿ, ಜಿಲ್ಲಾ ವಿಭಜನೆ ಮಾಡಿರುವುದನ್ನು ಕೈ ಬಿಡುವಂತೆ ಸುಮಾರು ಒಂದು ಲಕ್ಷ ಆಕ್ಷೇಪಣೆ ಪತ್ರ ಬರೆಯಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಜಿಲ್ಲೆಯ ನಾನಾ ತಾಲೂಕಿನ ಜನರಿಂದ ಆಕ್ಷೇಪಣೆ ಪತ್ರ ಬರೆಯಲಾಗಿದೆ. ಸರ್ಕಾರ ಒಂದು ತಿಂಗಳ ಅವಧಿಯನ್ನು ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಹೀಗಾಗಿ ಇಲ್ಲಿನ ಹೋರಾಟಗಾರರು ಹೆಚ್ಚು ಹೆಚ್ಚು ಆಕ್ಷೇಪಣೆ ಸಲ್ಲಿಸಲು ನಿರ್ಧಾರ ಮಾಡಿದ್ದಾರೆ…

suddinow.com
suddinow.com