ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಬಿಗ್ ಶಾಕ್: ಗಡಿಪಾರಿಗೆ ಕಮೀಷನರೇಟ್ ನಿರ್ಧಾರ…!

0

ಹುಬ್ಬಳ್ಳಿ

ಸುಮಾರು ದಿನಗಳಿಂದ ನಿರೀಕ್ಷೆಯಲ್ಲಿಯೇ ಉಳಿದಿದ್ದ ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಈಗ ಕಾಲ ಸನ್ನಿಹಿತವಾಗುತ್ತಿದೆ. ಈ ನಿಟ್ಟಿನಲ್ಲಿ ಹು-ಧಾ ಪೊಲೀಸ್ ಕಮೀಷನರೇಟ್ ಕೂಡ ಹಲವಾರು ಸಿದ್ಧತೆ ಮಾಡುತ್ತಿದ್ದು, ಪಾಲಿಕೆ ಚುನಾವಣೆಗೆ ಸಿದ್ಧತೆ ನಡೆಸಿದ್ದ ರೌಡಿಗಳಿಗೆ ಪೊಲೀಸ್ ಕಮೀಷನರ್ ಶಾಕ್ ಕೊಟ್ಟಿದ್ದಾರೆ.

ಕಳೆದ ವಾರದಿಂದ ರೌಡಿಗಳ ಮನೆ ಮೇಲೆ ಹು-ಧಾ ಪೊಲೀಸ್ ಕಮೀಷನರ್ ಲಾಭುರಾಮ್ ಸೂಚನೆಯಂತೆ ದಾಳಿ ನಡೆದಿತ್ತು. ಒಟ್ಟು 1300 ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ಹಿನ್ನೆಲೆಯಲ್ಲಿ ಇದೀಗ ಮುಂದುವರೆದ ಭಾಗ ಎನ್ನುವಂತೆ ಗಡಿಪಾರು ಪ್ಲ್ಯಾನ್ ಮಾಡಿದ್ದಾರೆ. ಸುಮಾರು 15ಕ್ಕೂ ಹೆಚ್ಚು ರೌಡಿಗಳು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಈ ಹಿನ್ನೆಲೆ ಪಾಲಿಕೆ ಚುನಾವಣೆಗೂ ತಯಾರಿ ಮಾಡಿಕ್ಕೊಂಡಿದ್ದ ರೌಡಿಗಳಿಗೆ ಪೊಲೀಸ್ ಕಮೀಷನರ್ ಬಿಗ್ ಶಾಕ್ ನೀಡಿದ್ದಾರೆ.

ಇನ್ನೂ ಚುನಾವಣೆಗೆ ತಯಾರಿ ನಡೆಸಿದ ಬೆನ್ನಲ್ಲೇ ಪೊಲೀಸ್ ಕಮೀಷನರ್ ರಿಂದ ಗಡಿಪಾರು ಪ್ಲ್ಯಾನ್ ಮಾಡಿದ್ದು, ಅಕ್ರಮ ಚಟುವಟಿಕೆ ಸೇರಿದಂತೆ ಕೊಲೆ, ಗ್ಯಾಂಬ್ಲಿಂಗ್ ನಲ್ಲಿ ತೊಡಗಿರುವ ರೌಡಿಗಳಿಗೆ ಶಾಕ್ ನೀಡಿ ಚುನಾವಣೆ ಸನಿಹವಾಗುತ್ತಿದ್ದಂತೆ ಗಡಿಪಾರು ಮಾಡಲಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply