ಬಳ್ಳಾರಿ –ಗಣಿ ಜಿಲ್ಲೆ ಖ್ಯಾತಿಯ ಬಳ್ಳಾರಿಯಲ್ಲಿ 54 ವರ್ಷದ ಚರ್ಚ್ ಫಾಸ್ಟರ್ ಜೊತೆ 24 ರ ಯುವತಿ ಎಸ್ಕೇಪ್ ಪ್ರಕರಣಕ್ಕೆ ಈಗ ಹೊಸ ತಿರುವು ಪಡೆದುಕೊಂಡಿದೆ. ಅಜ್ಞಾತ ಸ್ಥಳದಿಂದ ವೀಡಿಯೊ ಮಾಡಿರುವ ಯುವತಿ ತಾನು ಚರ್ಚ್ ಫಾಸ್ಟರ್ ಜೊತೆ ಹೋಗಲು ಕಾರಣ ಏನು ಎನ್ನುವುದನ್ನ ಬಿಚ್ಚಿಟ್ಟಿದ್ದಾಳೆ. ಬಳ್ಳಾರಿ ಸಮೀಪದ ಗುಗ್ಗರಟ್ಟಿ ನಿವಾಸಿ ಬಸವರಾಜ್ ಹಾಗೂ ವಿಜಯಲಕ್ಷ್ಮಿ ದಂಪತಿಯ ಪುತ್ರಿ 24 ವರ್ಷ ವಯಸ್ಸಿನ ಶ್ವೇತಾ ಡಿಸೆಂಬರ್ 16 ರಂದು ಇದ್ದಕ್ಕಿದ್ದಂತೆ ಕಾಣೆಯಾಗಿದ್ದಳು.

ಯುವತಿ ಧಿಡೀರ್ ನಾಪತ್ತೆ ಹಿಂದೆ ಬಳ್ಳಾರಿಯ ಲಿವಿಂಗ್ ವಾಟರ್ ಚರ್ಚ್ ನ ಫಾಸ್ಟರ್ 54 ವರ್ಷದ ರವಿಕುಮಾರ್ ಕೈವಾಡ ಇದೆ ಅಂತಾ ಶ್ವೇತಾ ಪೋಷಕರು ಆರೋಪ ಮಾಡಿದ್ದಾರೆ  ಅಲ್ಲದೇ  ಬಳ್ಳಾರಿ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈಗ ಆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಡಿಸೆಂಬರ್ 16 ರಂದು ಕಾಣೆಯಾದ ಶ್ವೇತಾ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ, ಪೋಷಕರ ವಿರುದ್ದವೇ ಪ್ರತ್ಯಾರೋಪ ಮಾಡಿದ್ದಾಳೆ.  ಅಲ್ಲದೇ ತಾನು ಚರ್ಚ್ ಫಾಸ್ಟರ್ ರವಿ ಜೊತೆ ಇದ್ದೇನೆ ಎನ್ನುವುದನ್ನ ಸ್ಪಷ್ಟಪಡಿಸಿದ್ದಾಳೆ. 12 ನಿಮಿಷಗಳ ಕಾಲ ವೀಡಿಯೋದಲ್ಲಿ ಮಾತನಾಡಿರುವ ಶ್ವೇತಾ, ನನ್ನನ್ನ ಬಲವಂತವಾಗಿ ಫಾಸ್ಟರ್ ಕರೆದುಕೊಂಡು ಬಂದಿಲ್ಲ. ನಾನೇ ಫಾಸ್ಟರ್ ಅವರನ್ನ ಬಲವಂತವಾಗಿ ಕರೆದುಕೊಂಡು ಬಂದಿದ್ದೇನೆ. ನಾನು ಚರ್ಚ್ ಗೆ ಹೋಗೊದು ನನ್ನ ತಂದೆ ತಾಯಿಗೆ ಇಷ್ಟ ಇರಲಿಲ್ಲ. ಹೀಗಾಗಿ ನನ್ನನ್ನ ಚರ್ಚ್ ಗೆ ಹೋಗದಂತೆ ಮಾಡಲು ಫಾಸ್ಟರ್ ಗೂ ನನಗೂ ನನ್ನಪೋಷಕರು ಸಂಬಂಧ ಕಲ್ಪಿಸಿದ್ದರು.

ಅಲ್ಲದೇ ಫಾಸ್ಟರ್ ಹಾಗೂ ಅವರ ಕುಟುಂಬದ ಮೇಲೆ ಹಲ್ಲೆ ಮಾಡಿದ್ರು. ಪೋಷಕರೇ ಸಂಬಂಧ ಕಲ್ಪಿಸಿದ ಕಾರಣ ನಾನೇ ಫಾಸ್ಟರ್ ರನ್ನ ಮದುವೆ ಆಗುವಂತೆ ಕರೆದುಕೊಂಡು ಬಂದಿದ್ದೇನೆ. ನಾವು ಮದುವೆಯಾಗಿದ್ದೇವೆ, ನನ್ನ ಹಾಗು ನನ್ನ ಗಂಡನಿಗೆ ಈಗ ನನ್ನ ಕುಟುಂಬದಿಂದ ಪ್ರಾಣ ಬೆದರಿಕೆ ಇದೆ. ಹೀಗಾಗಿ ನನಗೆ ರಕ್ಷಣೆ ಕೊಡಿ ಎಂದು ಅಧಿಕಾರಿಗಳಿಗೆ ಯುವತಿ ಶ್ವೇತಾ ಮನವಿ ಮಾಡುವ ಮೂಲಕ ಪೋಷಕರಿಗೆ ಟಾಂಗ್ ನೀಡಿದ್ದಾಳೆ.

ಯಾವ ತಂದೆ ತಾಯಿಗೂ ಇಂತಹ ಪರಿಸ್ಥಿತಿ ಬಾರದೇ ಇರಲಿ ಅಂತಾ ಗೋಳಿಟ್ಟರು. ಇನ್ನು ಕೈ ಮುಗಿದು ಕೇಳ್ಕೋತೀವಿ ನಮ್ಮ ಮಗಳು ಮನೆಗೆ ಬಂದ್ರೆ ಸಾಕು ಎನ್ನುತ್ತಿರುವ ಬಸವರಾಜ್ ದಂಪತಿ, ಫಾಸ್ಟರ್ ಜೊತೆ ಶ್ವೇತಾ ಇದ್ದರೇ ಅವಳ ಜೀವನ ಹಾಳಾಗುತ್ತೆ. ಯಾವುದಾದರು ಯುವಕನನ್ನ ಇಷ್ಟ ಪಟ್ಟಿದ್ದರೆ ಯಾವ ಜಾತಿ ಆದ್ರು ಮದುವೆ ಮಾಡಿಕೊಡ್ತಾ ಇದ್ವಿ, ಆದರೇ 50 ವರ್ಷಕ್ಕೂ ಹೆಚ್ಚಾದ ಹಾಗೂ ಮದುವೆಯಾಗಿ ಮಕ್ಕಳಿರುವವನ್ನ ಮದುವೆ ಆದ್ರೆ ಖಂಡಿತಾ ಅವಳ ಜೀವನ ಹಾಳಗತ್ತೆ ಎಂದು ಕಣ್ಣೀರಿಟ್ಟಿದ್ದಾರೆ.

ಕಳೆದ ಎರಡು ವಾರದಿಂದ ಗಣಿನಾಡು ಬಳ್ಳಾರಿ ಜನರನ್ನ ಬೆಚ್ಚಿ ಬೀಳಿಸಿದ್ದ ಯುವತಿ ಕಾಣೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಣೆಯಾದ ಯುವತಿ ಶ್ವೇತಾ ಚರ್ಚ್ ಫಾಸ್ಟರ್ ರವಿಕುಮಾರ್ ರನ್ನ ಮದುವೆಯಾಗಿರೋದು ಪಕ್ಕಾ ಆಗಿದೆ.ಈ ಮೂಲಕ ಇದು ಮತಾಂತರದ ದಂಧೆಯಾ…? ಅನ್ನೋ ಅನುಮಾನ ಇದೀಗ ವ್ಯಾಪಕವಾಗಿದೆ.

About Author

Priya Bot

Leave A Reply