ಮಂಗಳೂರು – ಮೀನುಗಾರಿಕಾ ಬೋಟ್ ವೊಂದು ಅವಘಡಕ್ಕೀಡಾಗಿ ದಡಕ್ಕೆ ಅಪ್ಪಳಿಸಿದ ಘಟನೆ ಮಂಗಳೂರಿನ ಉಳ್ಳಾಲ ಕೋಡಿಯಲ್ಲಿ ನಡೆದಿದೆ. ಬೋಟ್ ನಲ್ಲಿದ್ದ 10 ಮಂದಿ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಉಳ್ಳಾಲದ ಅಶ್ರಫ್ ಎಂಬುವವರಿಗೆ ಸೇರಿದ ಅಝಾನ್ ಎಂಬ ಹೆಸರಿನ ಬೋಟ್ ಶನಿವಾರ ತಡರಾತ್ರಿ ಮಂಗಳೂರಿನ ದಕ್ಕೆಯಿಂದ ಆಳಸಮುದ್ರ ಮೀನುಗಾರಿಕೆಗೆ ಹೊರಟಿತ್ತು. ಇಂದು ನಸುಕಿನ ವೇಳೆ ಬೋಟ್ ಉಳ್ಳಾಲ ಕೋಡಿಯ ಸೋಲಾರ್ ಕ್ಲಬ್‌ ಸಮೀಪ ಸಮುದ್ರ ದಡಕ್ಕೆ ಅಪ್ಪಳಿಸಿ ನಿಂತಿದೆ. ಈ ವೇಳೆ ಅದರಲ್ಲಿದ್ದ ಮೀನುಗಾರರನ್ನು ಸ್ಥಳೀಯರು ರಕ್ಷಿಸಿದ್ದಾರೆ.

ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಳ್ಳಾಲದ ಕಡಲಿನ ಬ್ರೇಕ್ ವಾಟರ್ ಕಾಮಗಾರಿಯಲ್ಲಿ ಮೊಗವೀರ ಪಟ್ಣ ಪ್ರದೇಶದಲ್ಲಿ ಎರಡು ರೀಫ್ ಗಳನ್ನು(ಬಂಡೆಗಳ ಸಾಲು)ಅಳವಡಿಸಲಾಗಿದ್ದು, ಈ ರೀಫ್ ಗಳ ಮಧ್ಯದಲ್ಲಿ 1,070 ಮೀಟರ್ ನಷ್ಟು ಅಂತರವಿದೆ. ಈ ಅಂತರವನ್ನೇ ಮೀನುಗಾರರು ನಸುಕಿನ ವೇಳೆ ಅಳಿವೆಬಾಗಿಲೆಂದು ಗ್ರಹಿಸಿ ಬೋಟ್ ಚಲಾಯಿಸುತ್ತಾರೆಂದು ಸ್ಥಳೀಯ ಮೀನುಗಾರರು ಹೇಳಿದ್ದಾರೆ. ರೀಫ್ ನಡುವೆ ಅಂತರವಿರುವ ಬಗ್ಗೆ ಯಾವುದೇ ಸೂಚನಾ ಪರಿಕರಗಳನ್ನ ಅಳವಡಿಸಿಲ್ಲ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply