ಬೆಳಗಾವಿ- ಬೆಳಗಾವಿ ಲೋಕಸಭೆಗೆ ಇದೇ ಎಪ್ರಿಲ್ 17 ರಂದು ಉಪಚುನಾವಣೆ ನಡೆಯಲಿದ್ದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀಮತಿ ಮಂಗಳ ಸುರೇಶ್ ಅಂಗಡಿ ಪರವಾನಗಿ ಮಾನ್ಯ ನಗರಾಭಿವೃದ್ಧಿ ಸಚಿವರಾದ  ಬಿ.ಎ.ಬಸವರಾಜ ಅವರು ದಿನಾಂಕ 6-4-2021 ರ ಮಂಗಳವಾರದಂದು ರಾಮದುರ್ಗ, ಸವದತ್ತಿ ,ಮಬನೂರು ಮುದೇನೂರು ಬೆನಕಟ್ಟಿ  ಸೇರಿದಂತೆ ಹಲವು ಹಳ್ಳಿಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡರು.

ವಿಧಾನ ಸಭೆ ಉಪಾಧ್ಯಕ್ಷರಾದ ಶ್ರೀ ಅನಂದ ಚಂದ್ರಶೇಖರ ಮಾಮನಿ, ರಾಮದುರ್ಗ ಶಾಸಕರಾದ ಮಹಾದೇವಪ್ಪ ಯಾದವಾಡ, ಶ್ರದ್ಧಾ ಶೆಟ್ಟರ್ ಸೇರಿದಂತೆ ಸ್ಥಳೀಯ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.  ಇದೇ  ಸಂದರ್ಭದಲ್ಲಿ ಮದನೂರು ಕ್ರಾಸ್ ಬಳಿ ಇರುವ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಮಾನ್ಯ ಶ್ರೀ ಬಸವರಾಜ ಅವರು ಮಾಲಾರ್ಪಣೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಿದರು.

 

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply