ಚಿಕಿತ್ಸೆಯಲ್ಲಿರುವ ಕ್ಷಯ ರೋಗಿಗಳೊಂದಿಗೆ  ನಗರದ ಖ್ಯಾತ ಮಕ್ಕಳ ವೈದ್ಯ ಹುಟ್ಟುಹಬ್ಬ ಆಚರಣೆ

0

ಗಂಗಾವತಿ ನಗರದ ಪ್ರಖ್ಯಾತ ಮಕ್ಕಳ ತಜ್ಞರಾದ  ಡಾ.ಅಮರೇಶ್ ಪಾಟೀಲ್ ಇವರು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಕೊಪ್ಪಳ, ಉಪ ವಿಭಾಗ ಆಸ್ಪತ್ರೆ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ  ಕೋವಿಡ್ ನಿಯಮಗಳ ಪಾಲನೆಯೊಂದಿಗೆ ಕ್ಷಯರೋಗಿಗಳ ಅಹವಾಲು ಸಭೆಯನ್ನು ಏರ್ಪಡಿಸಲಾಗಿತ್ತು.

ಚಿಕಿತ್ಸೆಯಲ್ಲಿರುವ ಕ್ಷಯರೋಗಿಗಳಿಗೆ ಹಣ್ಣುಗಳು ಹಾಗೂ ಪೌಷ್ಟಿಕಾಂಶಯುಕ್ತ ಪೌಡರ್ ವಿತರಣೆ ಮಾಡುವ ಮೂಲಕ ಡಾ.ಅಮರೇಶ್ ಪಾಟೀಲ್ ರವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ  ಆಚರಿಸಲಾಯಿತು.ಕಾರ್ಯಕ್ರಮದ ಕುರಿತು ಮಾತನಾಡಿದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಈಶ್ವರ ಸವಡಿ ರವರು  ಡಾ.ಅಮರೇಶ್ ಪಾಟೀಲ್ ರವರು ನಗರದ ಪ್ರಖ್ಯಾತ ವೈದ್ಯರು ಹಾಗೂ ಅಗರ್ಭ ಶ್ರೀಮಂತರಾಗಿದ್ದು ಅವರು ತಮ್ಮ ಹುಟ್ಟುಹಬ್ಬವನ್ನು ದೊಡ್ಡ ದೊಡ್ಡ ಪ್ರಖ್ಯಾತ ಹೋಟೆಲ್ಗಳಲ್ಲಿ ಆಚರಿಸಿಕೊಳ್ಳದೇ ಚಿಕಿತ್ಸೆಯಲ್ಲಿರುವ ಕಡುಬಡವ ರೋಗಿಗಳ ಜೊತೆಗೆ ಆಚರಿಸಿಕೊಂಡು ಅವರಿಗೆ ಆರೋಗ್ಯ ಸಲಹೆ ಜೊತೆಗೆ ಪೌಷ್ಟಿಕಾಂಶದ ವಿತರಿಸಿದ್ದು ವಿಶೇಷ. ನಗರದ ಇತರರು ಕೂಡ ಇದನ್ನು  ಪಾಲಿಸಿ ಸಮಾಜಕ್ಕೆ ನೆರವು ನೀಡಬೇಕೆಂದು ಕರೆಕೊಟ್ಟರು.

ಡಾ.ಅಮರೇಶ ಪಾಟೀಲ್ ರವರು ಮಾತನಾಡಿ ಕ್ಷಯರೋಗಕ್ಕೆ ಯಾರೂ ಭಯಪಡುವ ಅಗತ್ಯವಿಲ್ಲ. ರೋಗ ಲಕ್ಷಣಗಳು ಕಂಡುಬಂದರೆ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಬೇಕು. ಹಾಗೂ ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯುತ್ತಿರುವವರು 6 ವರ್ಷದೊಳಗಿನ ಮಕ್ಕಳನ್ನು ಕರೆತಂದು ಅವರಿಗೆ ಕ್ಷಯರೋಗ ಬಾರದಂತೆ ನೀಡುವ ಮಾತ್ರೆಗಳನ್ನು ಪಡೆದು ಮಕ್ಕಳಿಗೆ 6 ತಿಂಗಳ ವರೆಗೆ ನೀಡಬೇಕು ಎಂದು ಸಲಹೆ ನೀಡಿದರು.

ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ರಾಘವೇಂದ್ರರವರು ಮಾತನಾಡಿ ಸರ್ಕಾರ 2025 ರೊಳಗಡೆ ಕ್ಷಯರೋಗ ನಿರ್ಮೂಲನೆ ಮಾಡಲು ಪಣ ತೊಟ್ಟಿದೆ. ಸಾರ್ವಜನಿಕರು ಸಹಕಾರ‌ ನೀಡಬೇಕು ಎಂದರು. ಹವಾಲು ಸಭೆ ಕುರಿತು ಮಾತನಾಡಿದ ಕ್ಷಯರೋಗ ಆರೋಗ್ಯ ಪರಿವೀಕ್ಷಕ ಶ್ರೀ ಮಲ್ಲಿಕಾರ್ಜುನ ಕ್ಷಯರೋಗ ಚಿಕಿತ್ಸೆಯಲ್ಲಿ ಇರುವವರಿಗೆ ಇಲಾಖೆಯಿಂದ ಉಚಿತವಾದ ಮಾತ್ರೆಗಳನ್ನು ನೀಡಲಾಗುತ್ತಿದೆ. ಹಾಗೇಯೆ ಅಡ್ಡಪರಿಣಾಮಗಳನ್ನು ನಿರ್ವಹಿಸುತ್ತಿದ್ದು, ಲಾಕ್ಡೌನ್ ಸಮಯದಲ್ಲಿ ಅನೇಕ ಬಡ ರೋಗಿಗಳಿಗೆ ಆಹಾರ ಧಾನ್ಯದ ಕೊರತೆಯಾಗಿದ್ದು ಸಮಾಜದ ಇತರರು ಕೂಡ ಇಂಥ ಬಡರೋಗಿಗಳಿಗೆ ಸಹಾಯ ಹಸ್ತ ನೀಡಬೇಕೆಂದು ಮನವಿ ಮಾಡಿದರು ಹಾಗೂ ಕ್ಷಯರೋಗಿಗಳು ಎದೆಗುಂದುವ ಅವಶ್ಯಕತೆ ಇಲ್ಲ ಇಲಾಖೆ ಸದಾ ಅವರ ಜೊತೆ ಇರುವುದು ಎಂದು ಆತ್ಮಸ್ಥೈರ್ಯ ನೀಡಿದರು.

ಕಾರ್ಯಕ್ರಮದಲ್ಲಿ ಕ್ಷಯರೋಗ  ಚಿಕಿತ್ಸಾ ಮೇಲ್ವಿಚಾರಕ ಹುಸೇನ್ ಭಾಷಾ ಇವರು ಮಾತನಾಡಿ     ಚಿಕಿತ್ಸೆಯಲ್ಲಿರುವ ಎಲ್ಲರೂ ಸರಿಯಾದ ಸಮಯಕ್ಕೆ ಮಾತ್ರೆಯನ್ನು ಸೇವಿಸಿ ನಿರಂತರ ವ್ಯಾಯಾಮದ ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು.  ಯಾವುದೇ ಕರೋನ ಲಕ್ಷಣಗಳು ಕಂಡುಬಂದಾಗ ಮುಜುಗರವಿಲ್ಲದೆ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಪಡಬೇಕು ಹಾಗೂ ತಮ್ಮ ಯಾವುದೇ ಸಮಸ್ಯೆಗಳಿದ್ದರೆ ನಮ್ಮ ಆರೋಗ್ಯ ಚೇತನ ಸಹಾಯವಾಣಿಗೆ  9353161682  ಕರೆ ಮಾಡಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಮನವಿ ಮಾಡಿದರು, ಕಾರ್ಯಕ್ರಮಕ್ಕೆ ಬಂದಂತ ಎಲ್ಲಾ ಕ್ಷಯ ರೋಗಿಗಳ ತೂಕ ಮತ್ತು ಟೆಂಪರೇಚರ್ ಪರೀಕ್ಷೆಯನ್ನು ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನದ ಕುಮಾರಿ ಕಾಶಿಮ್ ಬೀ ಇವರು ನೆರವೇರಿಸಿದರು.  ಕಾರ್ಯಕ್ರಮದಲ್ಲಿ  ದೇವೇಂದ್ರಗೌಡ, ಟಿಬಿ ಚಾಂಪಿಯನ್ ರೇಷ್ಮಾ ಬಾನು, 36 ಜನ ಕ್ಷಯರೋಗಿಗಳು, ಆಶಾ ಕಾರ್ಯಕರ್ತೆಯರು ಹಾಗೂ ಅಮರ ಆಸ್ಪತ್ರೆಯ ಸಿಬ್ಬಂದಿಗಳಾದ ವಿರುಪಾಕ್ಷಿ, ಬಸವರಾಜ, ಅಶ್ವಿನಿ, ಶಾರದ, ಕಳಕಪ್ಪ, ಮರಿಯಪ್ಪ ಹಾಗೂ ರಮೇಶ ಭಾಗವಹಿಸಿದ್ದರು.

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply