ಕೊಟ್ಟೂರು: ದೇಶದಲ್ಲಿ ಜಾತಿಗಳ ಮಧ್ಯೆ ಕಲಹ ತಂದಿಟ್ಟು ಸಮಾಜದಲ್ಲಿನ ಸಹಬಾಳ್ವೆಗೆ ಬೆಂಕಿಯಿಟ್ಟು ಪೆಟ್ರೋಲ್ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಹೆಚ್ಚಳ ಮಾಡಿ ಶ್ರಮಿಕ ವರ್ಗವನ್ನು ತೆರಿಗೆ ಎಂಬ ಕೂಪಕ್ಕೆ ಸಿಲುಕಿಸಿದೆ ಎಂದು ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಎಸ್. ಭೀಮನಾಯ್ಕ್ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ತೈಲ ಬೆಲೆ ಏರಿಕೆ ಖಂಡಿಸಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಂಗಳವಾರ ಪಟ್ಟಣದ ಉಜ್ಜಿನಿ ರಸ್ತೆಯ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ನಂಬಿ ಮತ ಹಾಕಿದ ಎಲ್ಲಾ ಮತದಾರರಿಗೂ ತಮ್ಮ ತಮ್ಮ ಖಾತೆಗೆ 15 ಲಕ್ಷ ರೂ ಹಣ ಎರಡು ಲಕ್ಷ ಕೋಟಿ ಉದ್ಯೋಗ ನೀಡದೆ ಸುಳ್ಳು ಭರವಸೆ ನೀಡಿ ದೇಶದ ಜನರಿಂದ ತೆರಿಗೆ ವಸೂಲಿ ಮಾಡುತ್ತಿದೆ ಎಂದು ಖಾರವಾಗಿ ನುಡಿದರು.

ಈಗಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಆಪರೇಷನ್ ಕಮಲದ ಪಿತಾಮಹ ಇದ್ದಂತೆ ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಶ್ರಮಿಸುತ್ತಿರುವಾಗ ನಮ್ಮ ಸಮ್ಮಿಶ್ರ ಸರ್ಕಾರದ 19 ಶಾಸಕರನ್ನು ಲಂಚ ಕೊಟ್ಟು ಖರೀದಿ ಮಾಡಿಕೊಂಡು ಕಳ್ಳದಾರಿಯಲ್ಲಿ ಬಂದು ಅಧಿಕಾರ ಗಿಟ್ಟಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

2020 ರಿಂದ 2021 ವರಗೆ ಆರೋಗ್ಯ ಇಲಾಖೆಯಲ್ಲಿ ಸುಮಾರು 2 ಸಾವಿರ ಕೋಟಿ ಹಣ ಲೂಟಿ ಮಾಡಿರುವ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಾಖಲೆ ಸಮೇತ ಇಂದು ಸುದ್ದಿಗೋಷ್ಠಿ ನಡೆಸಿ ಸರ್ಕಾರದ ಅಕ್ರಮಗಳನ್ನು ಜನರ ಮುಂದೆ ಎಳೆ ಎಳೆಯಾಗಿ ಬಿಚ್ಚಿಡಲಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಎಂಎಂ ಹರ್ಷವರ್ಧನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವಯೋಗಿ ಮುಖಂಡರಾದ ಸುಧಾಕರ್ ಪಾಟೀಲ್ ಗೌಡ ಎಪಿಎಂಸಿ ಮಾಜಿ ಅಧ್ಯಕ್ಷ ಬೂದಿ ಶಿವಕುಮಾರ ಮೋಟಗನಹಳ್ಳಿ ಕೊಟ್ರೇಶ್ ದ್ವಾರಕೇಶ್ ಎಂ ರಾಜೀವ್ ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ ಹೊಸಮನಿ ದಲಿತ ಮುಖಂಡ ಹನುಮಂತಪ್ಪ ವಕೀಲರು ಕೊಚಾಲಿ ಮಂಜುನಾಥ, ಬಣಕಾರ್ ಶಿವು ಮೇಘರಾಜ್, ಅಟವಳಿಗಿ ಸಂತೋಷ್ ಮುಂತಾದವರು ಇದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

IMG-20210615-WA0019.jpg

Email

Huligesh Tegginakeri

About Author

Huligesh Tegginakeri

ಬಳ್ಳಾರಿ ಜಿಲ್ಲೆಯ ಕೊಟ್ಟೂರು ತಾಲೂಕಿನಲ್ಲಿ ಕಳೆದ ಎಂಟು ವರ್ಷಗಳ ಕಾಲ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ.. ವಿಶೇಷ, ವಿಭಿನ್ನ ರೀತಿಯ ಸುದ್ದಿಗಳನ್ನು ಕಲೆಹಾಕಿ ಬರೆಯುವುದೇ ನನ್ನ ಹವ್ಯಾಸ..

Leave A Reply