ಬಿಜೆಪಿಯಲ್ಲಿ ಮುಗಿದೆ ಇಲ್ಲ ಆ ಚರ್ಚೆ…!

0

ಮಂಗಳೂರು  – ಸಿಎಂ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಂಗಳೂರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ಇದು ಭಾರತೀಯ ಜನತಾ ಪಾರ್ಟಿಯ ವಿಶೇಷತೆ. ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ ಆದರ್ಶ ರಾಷ್ಟ್ರ ನಾಯಕರಾಗಿದ್ದಾರೆ.

ಪಕ್ಷದಲ್ಲಿ ಇಂತಹ ಯಾವುದೇ ಚರ್ಚೆಗಳಿಲ್ಲ, ಭಿನ್ನಾಭಿಪ್ರಾಯಗಳಿಲ್ಲ. ನಮ್ಮ ಸರ್ವ ಸಮ್ಮತಿಯ ನಾಯಕ ಯಡಿಯೂರಪ್ಪನವರು ಎಂದು ಹೇಳಿದ ಅವರು ಬಿಎಸ್ ವೈ ಪಕ್ಷದ ಸೂಚನೆಯಂತೆ ನಡೆಯುತ್ತೇನೆ ಎಂದು ಹೇಳಿರೋದು ಆದರ್ಶವಾಗಿದೆ ಅಂದರು. ಯಡಿಯೂರಪ್ಪನವರು ಅಧಿಕಾರಕ್ಕೆ ಅಂಟಿ ಕೂತವರಲ್ಲ. ಪಕ್ಷ ಹೇಳಿದ್ರೆ ರಾಜೀನಾಮೆ ಕೊಡ್ತೇನೆ ಅಂದಿದ್ದಾರೆ.

ಪಕ್ಷದಲ್ಲಿ ಯಾವುದೇ ನಾಯಕತ್ವ ಬದಲಾವಣೆ ಇಲ್ಲ ಅಂತ ರಾಷ್ಟ್ರೀಯ ನಾಯಕರು ಹೇಳಿದ್ದಾರೆ. ಇಂತಹ ಚರ್ಚೆಗಳು ಅಪ್ರಸ್ತುತ. ಸದ್ಯ ಕೋವಿಡ್ ನಿರ್ವಹಣೆ ನಮ್ಮ ಜವಾಬ್ದಾರಿ. ಯಡಿಯೂರಪ್ಪನವರು ಕಾರ್ಯಕರ್ತರಿಗೆ ಆದರ್ಶವಾದ ಹೇಳಿಕೆ ಕೊಟ್ಟಿದ್ದಾರೆ. ಆದರೆ ಅಂತಹ ಚರ್ಚೆಗಳಿಲ್ಲ ಎಂದು ಸ್ಪಷ್ಟನೆ ನೀಡಿದ ಅವರು,

ಪಕ್ಷ ಮತ್ತು ‌ರಾಷ್ಡ್ರೀಯ ನಾಯಕರ ಮುಂದೆ ಈ ಚರ್ಚೆಯೇ ಇಲ್ಲ. ಅವರು ಸಿಎಂ ಆದ ಮೇಲೆ ವಿರೋಧ ಪಕ್ಷ ಟೀಕೆ ಮತ್ತು ಅಪವಾದ ಇತ್ತು. ಇದೆಲ್ಲದರ ನೋವು ಯಡಿಯೂರಪ್ಪನವರಲ್ಲಿ ಇರಬಹುದು. ಆದರೆ ನಾನೊಬ್ಬ ಕಾರ್ಯಕರ್ತ ಅನ್ನೋ ನೆಲೆಯಲ್ಲಿ ಇವತ್ತು ಸಂದೇಶ ಕೊಟ್ಟಿದ್ದಾರೆ. ಪರ್ಯಾಯ ನಾಯಕತ್ವದ ಬಗ್ಗೆ ಅವರು ಸಹಜ ಹೇಳಿಕೆ ನೀಡಿದ್ದಾರೆ. ನಮ್ಮಲ್ಲಿ ಹತ್ತಾರು ನಾಯಕರಿದ್ದಾರೆ ಅಂತ ಒಬ್ಬ ಹಿರಿಯರಾಗಿ ಹೇಳಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ರೆಬಲ್ ಗಳಿಲ್ಲ. ಎಲ್ಲರಿಗೂ ಹೇಳಿದ್ದೇವೆ. ಏನೇ ನೋವುಗಳು ಇದ್ದರೂ ಮಾತುಕತೆ ಮಾಡಲು ಸೂಚಿಸಿದ್ದೇವೆ. ಕೆಲವರ ಭಾವನೆ ಮತ್ತು ನೋವುಗಳು ಸರ್ಕಾರ ನಡೆಸುವಾಗ ಇರುತ್ತದೆ. ಅದನ್ನ ಸರಿ ಮಾಡಿದ್ದೇವೆ. ನಮ್ಮಲ್ಲಿ ಸಿಎಂ ಬದಲಾವಣೆ ಚರ್ಚೆ ಇಲ್ಲ, ಗೊಂದಲ, ಅಪಸ್ವರಗಳಿಲ್ಲ ಎಂದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply