ನವದೆಹಲಿ- ಪ್ರಭಾವಿ ಮಾಧ್ಯಮಗಳಲ್ಲಿ ಒಂದಾದ ಸಾಮಾಜಿಕ ಜಾಲತಾಣದಲ್ಲಿ ಸಿಗ್ನಲ್ ಆ್ಯಪ್ ಭಾರಿ ಸದ್ದು ಮಾಡುತ್ತಿದೆ. ವಾಟ್ಸಾಪ್ ಬದಲಿಗೆ ಸಿಗ್ನಲ್ ಆ್ಯಪ್ ಬಳಸಿ ಎಂಬ ಎಲೋನ್ ಮಸ್ಕ್ ಟ್ವೀಟ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. ಇನ್ನು ವಾಟ್ಸಪ್ ಬಿಸಿನೆಸ್ ಆ್ಯಪ್ ಪೇಸ್ ಬುಕ್ ಗೆ ಲಿಂಕ್ ಮಾಡುವುದು ಕಡ್ಡಾಯ ಮಾಡಿದ ಮೇಲಂತೂ ಬಹುತೇಕ ಜನರು ವಾಟ್ಸಪ್ ತೊರೆದು ಸಿಗ್ನಲ್ ನತ್ತ ಮುಖಮಾಡಿದ್ದಾರೆ. ಇತ್ತ ಟೆಲಿಗ್ರಾಮ್ ಕೂಡ ತಮ್ಮ ಬಳಕೆದಾರರಿಗೆ ಕನಿಷ್ಠ ಹಣ ಪಾವತಿ ನಿಯಮ ಜಾರಿ ತರಲು ಮುಂದಾಗಿದ್ದು ಜನರು ಟೆಲಿಗ್ರಾಂ ಸಹ ತೊರೆದು ಸಿಗ್ನಲ್ ಕಡೆ ಮುಖಮಾಡುತ್ತಿದ್ದಾರೆ.
ಸುದ್ದಿಯಾಗಿತ್ತು. ಇದರ ಜೊತೆಗೆ ವಾಟ್ಸಾಪ್ ಕೂಡ ತನ್ನ ಗೌಪ್ಯತೆ ನೀತಿಗಳನ್ನು ನವೀಕರಿಸಿದ ಮೇಲಂತೂ, ಜನರು ಸಿಗ್ನಲ್ ಆ್ಯಪ್ ಕಡೆಗೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಒಂದು ಕಡೆ ಜನರು ವಾಟ್ಸಪ್ ತೊರೆದರೆ ಮತ್ತೊಂದು ಕಡೆ ಟೆಲಿಗ್ರಾಂ ಗೆ ಗುಡ್ ಬೈ ಹೇಳುತ್ತಿದ್ದಾರೆ. ಹೀಗಾಗಿ ಸಿಗ್ನಲ್ ಟ್ರೆಂಡಿಗ್ ಸೋಸಿಯಲ್ ಮೆಸೆಂಜರ್ ಆ್ಯಪ್ ಬದಲಾಗುತ್ತಿದ್ದೆ. ಇನ್ನು ಭಾರತದ ಫ್ರೀ ಆ್ಯಪ್ ಡೌನ್ಲೋಡ್ ಲಿಸ್ಟ್ ನಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ. ಇನ್ನು ಕೇವಲ ಸಿಗ್ನಲ್ ಭಾರತದಲ್ಲಿ ಮಾತ್ರವಲ್ಲದೆ ಆಸ್ಟ್ರೇಲಿಯಾ ಫಿನ್ಲ್ಯಾಂಡ್ ಹಾಂಕಾಂಗ್ ಸೇರಿದಂತೆ ಬಹುತೇಕ ದೇಶಗಳಲ್ಲಿ ಸಿಗ್ನಲ್ ಸದ್ದು ಮಾಡುತ್ತಿದೆ. ಆ್ಯಪಲ್ ಆಂಡ್ರಾಯ್ಡ್ . ಲೀನಿಕ್ಸ್ ಮತ್ತು ಮ್ಯಾಕ್ ಬಳಕೆದಾರರು ಸಹ ಈ ಆ್ಯಪ್ ಬಳಸಬಹುದಾಗಿದೆ.