೬ ತಾಸಿನಲ್ಲ ೧೨ ಎಕರೆ ಬಿತ್ತನೆ ಮಾಡಿದ ಅಣ್ಣ-ತಮ್ಮ

0

ರಾಯಚೂರು – ಮುಂಗಾರು ಬಿತ್ತನೆ ಶುರುವಾಗಿದ್ದು, ರೈತರು ಕೃಷಿ‌ ಚಟುವಟಿಕೆಯಲ್ಲಿ ತಲ್ಲಿನರಾಗಿದ್ದಾರೆ. ಇತ್ತ ರಾಯಚೂರು ಜಿಲ್ಲೆಯ ರೈತರಿಬ್ಬರು ತಮ್ಮ ೧೨ ಎಕರೆ ಹೊಲದಲ್ಲಿ ಆರು ತಾಸಿನಲ್ಲಿ ಬಿತ್ತನೆ ಕಾರ್ಯ ಮಾಡುವ ಮೂಲಕ ಗ್ರಾಮಸ್ಥರಿಂದ ಸೈ ಎನಿಸಿಕೊಂಡಿದ್ದಾರೆ.

ಜಿಲ್ಲೆಯ ದೇವದುರ್ಗ ತಾಲೂಕಿನ ವಂದಲಿ ಗ್ರಾಮದ ಮುದೇಣ್ಣ, ಶಿವರೆಡ್ಡಿ ತಮ್ಮ ೧೨ ಎಕರೆ ಜಮೀನಿನಲ್ಲಿ ಇಂದು ಬಿತ್ತನೆ ಕಾರ್ಯ ಶುರು ಮಾಡಿದ್ರೆ‌. ೩ ಕೂಂಟೆಗಳನ್ನ ಕಟ್ಟಿಕೊಂಡು ಬೆಳಿಗ್ಗೆ ಶುರು ಮಾಡಿ, ೧೨ ಎಕರೆಯಲ್ಲಿ ೬ ತಾಸನಲ್ಲಿ ತೊಗರಿ ಬಿತ್ತನೆ ಕಾರ್ಯ ಮುಗಿಸಿದ್ದಾರೆ. ೬ ತಾಸಿನೊಳಗ್ಗೆ ೧೨ ಎಕರೆ ಬಿತ್ತನೆ ಮಾಡುವುದು ಸುಲಭದ‌ ಕೆಲಸವಲ್ಲ. ಆದ್ರೆ ಮುದೇಣ್ಣ ಹಾಗೂ ತಮ್ಮ ಶಿವರೆಡ್ಡಿ ಇಬ್ಬರು ಸೇರಿಕೊಂಡು ೬ ತಾಸಿನೊಳಗೆ ಬಿತ್ತನೆ ಕಾರ್ಯ ಮೂಲಕ ಜನರಿಂದ ಸೈ ಎನ್ನಿಸಿಕೊಂಡಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply