ನಹದೆಹಲಿ- ಕರೋನ ಹೆಮ್ಮಾರಿ ದಾಳಿ ಬಳಿಕ ಎಚ್ಚೆತ್ತುಕೊಂಡಿರು ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದ್ರೆ.  ಶೇ138 ಹೆಚ್ಚಳವಾಗಿದೆ 2021-22ನೇ ಸಾಲಿನ ಕೇಂದ್ರ ಬಜೆಟ್​ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಮಂಡಿಸುತ್ತಿದ್ದು, ಕೊರೊನಾ ಸಾಂಕ್ರಾಮಿದಿಂದಾಗಿ ಅತಿ ಹೆಚ್ಚು ನಿರೀಕ್ಷೆಯಿದ್ದ ಆರೋಗ್ಯ ಕ್ಷೇತ್ರಕ್ಕೆ 64,180 ಕೋಟಿ ರೂ. ವಿಶೇಷ ನಿಧಿ ಮೀಸಲಿಡಲಾಗಿದೆ ಎಂದು ತಿಳಿಸಿದ್ದಾರೆ

‘ಪ್ರಧಾನಮಂತ್ರಿ ಸ್ವಾಸ್ಥ್ಯ ಭಾರತ ಯೋಜನೆ’ ಆರಂಭಿಸಲಾಗುತ್ತಿದ್ದು, ಮುಂದಿನ ಆರು ವರ್ಷಗಳ ವರೆಗೆ ಈ ಹಣವನ್ನು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಆರೋಗ್ಯ ಸೇವೆಗಾಗಿ ಈ ಅನುದಾನವನ್ನು ವಿನಿಯೋಗ ಮಾಡಲಾಗುವುದು ಎಂದು ಹಣಕಾಸು ಸಚಿವರು ಹೇಳಿದ್ದಾರೆ.

ನವದೆಹಲಿ- ಕೇಂದ್ರ ಸರ್ಕಾದ 2021 -22 ರ ಬಜೆಟ್ ಮಂಡನೆ ಯಾಗುತ್ತಿದ್ದು ಈಗಾಗಲೇ ದೇಶದಲ್ಲಿ ಎರಡು ಲಸಿಕೆ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಎರಡು ಲಸಿಕೆಗಳು ಬರಲಿವೆ ಎಂದ ವಿತ್ತ ಸಚಿವೆ‌ ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.  ಈಗಾಗಲೇ ದೇಶದಲ್ಲಿ ಲಸಿಕೆ ನೀಡುವ ಕಾರ್ಯಾ ಆರಂಭವಾಗಿದ್ದು,  ಕೋವಿಡ್ ಲಸಿಗೆಗಾಗಿ ಸರ್ಕಾರ 35 ಸಾವಿರ ಕೋಟಿ ಮೀಸಲಿರಿಸಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಎಂದು ತಿಳಿಸಿದ್ದಾರೆ.

ಈ ವರ್ಷದ ಬಜೆಟ್  2021-22 ನಲ್ಲಿ ಕೋವಿಡ್ ಲಸಿಕೆಗಾಗಿ 35 ಸಾವಿರ ಕೋಟಿ ರೂ ಮೀಸಲಿಡಲಾಗಿದೆ. ಅವಶ್ಯಕತೆ ಬಿದ್ದರೆ ಹೆಚ್ಚಿನ ಅನುದಾನವನ್ನು   ಮೀಸಲಿರಿಸಲಾಗುವುದು. ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿಕೊಂಡರೆ, ಈ ವರ್ಷದ ಹೆಲ್ತ್ ಬಜೆಟ್ ಗೆ 2 ಲಕ್ಷ 32 ಸಾವಿರ ಕೋಟಿ ಅನುದಾನ  ಏರಿಕೆ ಕಂಡಿದೆ. ಈ ಮೊದಲಿನ ಬಜೆಟ್ ನಲ್ಲಿ 92 ಸಾವಿರ ಕೋಟಿ ಫಂಡ್ ನೀಡಲಾಗಿತ್ತು. ಈ ಬಾರಿ ಹೆಲ್ತ್ ಬಜೆಟ್ ಫಂಡ್ ಶೇ.137ರಷ್ಟು ಏರಿಕೆಯಾಗಿದೆ ಎಂದು ನಿರ್ಮಾಲಾ ಸೀತಾರಾಮನ್ ತಿಳಿಸಿದ್ದಾರೆ.

About Author

Priya Bot

Leave A Reply