ಮತ್ತೊಂದು ಹೋರಾಟಕ್ಕೆ ಸಜ್ಜಾದ ಬೆಂಗಳೂರು ಜಲಮಂಡಳಿ ಹೊರಗುತ್ತಿಗೆ ನೌಕರರು
ಸುಮಾರು ಹತ್ತು ವರ್ಷಗಳಿಂದಲೂ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಬೆಂಗಳೂರು ಜಲಮಂಡಳಿ ಹೊರಗುತ್ತಿಗೆ ನೌಕರರು ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದು ಅವರ ಆಗ್ರಹ. ಮಾನ್ಯ ನ್ಯಾಯಾಲಯ ಸುಪ್ರೀಂ ಕೋರ್ಟ್ ಆದೇಶದಂತೆ ಹೊರಗುತ್ತಿಗೆ ನೌಕರರು ಕೂಡ ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯಲು ಅರ್ಹರು ಎಂಬ ತೀರ್ಪಿನ ಅನ್ವಯವಾಗಿ ಹೊರಗುತ್ತಿಗೆ ನೌಕರರು ಬೇಡಿಕೆಯನ್ನು ಇಟ್ಟಿದ್ದಾರೆ ಆದರೆ ಇಲಾಖೆ ಇದ್ಯಾವುದಕ್ಕೂ ಸ್ಪಂದಿಸದಿರುವುದು ಹೊರಗುತ್ತಿಗೆ ನೌಕರರ ಆಕ್ರೋಶಕ್ಕೆ ಕಾರಣವಾಗಿದೆ ಹಾಗೂ ಪಿಎಫ್ ಹಣವನ್ನು 2014 ಅನ್ವಯವಾಗಿ ನೀಡುತ್ತಿರುವುದು ಗುತ್ತಿಗೆ ನೌಕರರ ಕೋಪಕ್ಕೆ ಮತ್ತಷ್ಟು ಕಾರಣವಾಗಿದೆ .
ಇಲಾಖೆಯು 24 ಸಾವಿರ ರೂಪಾಯಿ ಎಂದು ನಿಗದಿಪಡಿಸಿದ ಮೊತ್ತದಲ್ಲಿ ಏಜೆನ್ಸಿಯವರು ಕೇವಲ 16050 ರೂಪಾಯಿ ಕೊಡುವ ಮುಖಾಂತರ ದೊಡ್ಡ ಬ್ರಷ್ಟಾಚಾರ ನೆಡೆದ್ದಿದೆ ಎಂದು ಹೊರಗುತ್ತಿಗೆ ನೌಕರರು ಅಳಲು ತೋಡಿಕೊಂಡರು . ಹಾಗಾಗಿ ಅತಿ ಶೀಘ್ರದಲ್ಲಿಯೇ ಸಮಾನ ಕೆಲಸಕ್ಕೆ ಸಮನ ವೇತನಗಾಗಿ ಹೋರಾಟವನ್ನು ಪ್ರಾರಂಭ ಮಾಡಲಾಗುವುದು ಎಂದು ಹೊರಗುತ್ತಿಗೆ ನೌಕರರು
ಪ್ರತಿಬಾರಿಯೂ ವೇತನ ಹೆಚ್ಚಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಯಾವುದನ್ನು ಕಾರ್ಮಿಕ ಇಲಾಖೆ ಗಮನಿಸದಿರುವುದು ಅಧಿಕಾರಿಗಳ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಈ ಬಾರಿ ಹೋರಾಟ ಆರಂಭಿಸಿದರೆ ಯಶಸ್ವಿಯಾಗುವರು ಬಿಡುವುದಿಲ್ಲ ಎಂದು ಹೊರಗುತ್ತಿಗೆ ನೌಕರರ ಚೆನ್ನಕೇಶವ ಹೇಳಿದರು.
ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow
ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/
Jyothish kumar