ಹೊಸಪೇಟೆ- ಕರ್ನಾಟಕ ರಾಜ್ಯ ಗ್ರಾಮಪಂಚಾಯಿತಿ ನೌಕರರ ಸಂಘದ ಜಿಲ್ಲಾ ಸಮಿತಿಯು ಸಭೆಯನ್ನು  ಇಂದು ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಗರದ ಸಿಐಟಿಯು ಕಚೇರಿಯಲ್ಲಿ ನೆರವೇರಿಸಲಾಯಿತು. ರಾಜ್ಯ ಸಮಿತಿಯ ತಿರ್ಮಾನಗಳನ್ನು ಜಾರಿ ಮಾಡಲು ಹಾಗೂ ಸಿಐಟಿಯು ಮುಂದಿನ  ಹೊರಾಟದ ಬಗ್ಗೆ ಚರ್ಚೆ ಮಾಡಲಾಯಿತು. ಬಳಿಕ ಹೊಸದಾಗಿ ಬಂದ ನೌಕರರಿಗೆ ನೂತನವಾಗಿ ಸದಸ್ಯತ್ವವನ್ನು ನೀಡಲಾಯಿತು.‌

ಸಂಘವನ್ನು ಬಲ ಪಡಿಸಲು ಹೆಚ್ಚಿನ ಸಂಖ್ಯೆಯಲ್ಲಿ  ಸದಸ್ಯತ್ವವನ್ನು ಮಾಡಿಸಲು ಸದಸ್ಯರಿಗೆ ಕರೆ ನೀಡಲಾಯಿತು. ಬಳಿಕ ‌ ಮುಂದಿನ ಹೊರಟದ ಬಗ್ಗೆ ಚರ್ಚೆ ನಡೆಸಲಾಯಿತು.  ಈ ಸಭೆಗೆ ಸಿಐಟಿಯು ಜಿಲ್ಲಾ ಅಧ್ಯಕ್ಷರಾದ ಆರ್ ಬಾಸ್ಕರೆಡ್ಡಿ,ಬಾಗವಹಿಸಿದ್ದರು, ಸಭೆಯ ಅಧ್ಯಕ್ಷತೆಯನ್ನು ಆರ್ ಎಸ್ ಬಸವರಾಜ ವಹಿಸಿದ್ದರು, ಜಿಲ್ಲಾ ಖಜಾಂಚಿಯಾದ ಪವಿತ್ರಾ ಇವರು ಸ್ವಾಗತಿಸಿದರು,  ಎಲ್ಲಾ ತಾಲೂಕಿನ ಪದಾಧಿಕಾರಗಳು ಭಾಗವಹಿಸಿದ್ದರು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಂದನೆ ಅರ್ಪಣೆ ಮಾಡಿದರು,

Leave A Reply