ಚಂದ್ರಚೂಡ ಬೆವರಿಳಿಸಿದ ಕಿಚ್ಚಾಸುದೀಪ್

0

ಬೆಂಗಳೂರು  –  ಅದ್ಯಾಕೋ ಗೊತ್ತಿಲ್ಲ ಕಳೆದ ಒಂದು ವಾರದಿಂದ ಬಿಗ್ ಬಾಸ್ ಮನೆಯಲ್ಲಿ ಗದ್ದಲವೂ ಗದ್ದಲ.‌ ಯಾವಾಗ ಬಿಗ್ ಬಾಸ್ ಎರಡನೇ ಸಾರಿ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳು ರೀ ಎಂಟ್ರಿಕೊಟ್ರು ಅಲ್ಲಿಂದ ಬಿಗ್ ಬಾಸ್ ಮನೆ ಧಗಧಗನೆ ಉರಿಯುತ್ತಿದೆ.  ಇದಕ್ಕೆಲ್ಲ ಕಾರಣ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಬಂದಿರುವ ಚಂದ್ರಚೂಡ ಅಂದರೆ ತಪ್ಪಾಗಲಿಕ್ಕಿಲ್ಲ. 

ಕಾರಣ ಬಿಗ್ಬಾಸ್ ಮನೆಗೆ ಅವರು ಬಂದ ಮೇಲೆ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಗಿದೆ.  ಇನ್ನು ಕರೋನಾ  ಸೋಂಕಿನಿಂದಾಗಿ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಮತ್ತೆ ಆರಂಭವಾದಾಗ,  ಬಿಗ್ ಬಾಸ್ ಮನೆಗೆ ಎಲ್ಲಾ ಸ್ಪರ್ಧಿಗಳು ಎಂಟ್ರಿಕೊಟ್ರು. ಆಗಿನಿಂದ ಬಿಗ್ ಬಾಸ್ ಮನೆ ಒಂದು ರೀತಿಯಲ್ಲಿ ಧಗಧಗ ಎನ್ನುತ್ತಿದೆ.  ಶನಿವಾರ ನಡೆದ ವಾರದ ಕಥೆ  ಕಿಚ್ಚನ ಜೊತೆ ಕಿಚ್ಚಾ ಸುದೀಪ್ ಜೊತೆಯಲ್ಲಿ ಎಪಿಸೋಡ್ ನಲ್ಲಿ,  ಚಂದ್ರಚೂಡ್ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ,  ಮುಂದೆ ಹೇಳೋದೊಂದು ಹಿಂದೆ ಮಾಡೋದು ಮತ್ತೊಂದು ಇದನ್ನು ಗಮನಿಸಿದ ಕಿಚ್ಚ ಸುದೀಪ್,  ರಾಜ್ಯದ ಜನತೆಯ ಮುಂದೆ ಅವರ ವ್ಯಕ್ತಿತ್ವವನ್ನು ತೆರೆದು ಇಟ್ಟಿದ್ದಾರೆ. ಇದು ಚಕ್ರವರ್ತಿ ಚಂದ್ರಚೂಡ ಅವರಿಗೆ ನುಂಗಲಾರದ ತುತ್ತಾಗಿತ್ತು.

ಕಾರಣ ನಾನು 13 ಕಲಾ ಪ್ರಕಾರಗಳಲ್ಲಿ ಪರಿಣಿತ ಎನ್ನುತ್ತಿದ್ದ  ಚಂದ್ರಚೂಡ ಅವರ ಗರ್ವಕ್ಕೆ ಕೊಡಲಿಪೆಟ್ಟು ಬಿದ್ದಂತಾಗಿದೆ. ಇನ್ನು ಹುಟ್ಟು ಹೋರಾಟಗಾರ ನಂತೆ ಬಿಂಬಿಸಿಕೊಳ್ಳುವ ಮತ್ತೊಬ್ಬ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಅವರ ಆಟಕ್ಕೂ ಕಿಚ್ಚ ಸುದೀಪ್ ಬ್ರೇಕ್ ಹಾಕಿದ್ದಾರೆ‌.  ಇದೆಲ್ಲರ ಮಧ್ಯೆ ಇಂದು ಮನೆಯಿಂದ ಹೊರ ಹೋಗೋರು ಯಾರು ಎಂಬುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ ಆದ್ರೆ ಕಳೆದ ವಾರದಂತೆ ಈ ವಾರವೂ ಅಚ್ಚರಿ ಫಲಿತಾಂಶ ಬಂದರು ಯಾರು ಅಚ್ಚರಿಪಡುವಂತಿಲ್ಲ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply