ಕರೀನಾ ಕಪೂರ್ ಮೇಲೆ ಪ್ರಕರಣ ದಾಖಲು

0

ಮುಂಬೈ

ಸ್ಟಾರ್ ನಟ ನಟಿಯರಿ ಮೇಲೆ ಕೇಸ್ ಹಾಕುವುವರ ಸಂಖ್ಯೆ ಈಗ ಹೆಚ್ಚಾಗಿದೆ. ಕೆಲ ಪ್ರಕರಣಗಳಲ್ಲಿ ಸಣ್ಣ ಸಣ್ಣ ವಿಷಯಕ್ಕೂ ನಟ ನಟಿಯರನ್ನು ಕೋರ್ಟ್ ಗೆ ಎಳೆಯುವುದ ಸರ್ವೇ ಸಾಮಾನ್ಯವಾಗಿದೆ.‌ ಈಗ ಬಾಲಿವುಡ್ ನ ಸ್ಟಾರ್ ನಟಿ ಕರೀನಾ ಕಪೂರ್ ಸರದಿ. ಹೌದು ಕರೀನಾ ಕಪೂರ್ ವಿರುದ್ಧ ಈಗ ಮಹಾರಾಷ್ಟ್ರದ ಬೀಡ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  ಬೀಡ್ ನಗರದ ಪೊಲೀಸ್ ಠಾಣೆಯೊಂದರಲ್ಲಿ ಗುಂಪೊಂದು ದೂರು ನೀಡಿದ ಹಿನ್ನೆಲೆಯಲ್ಲಿ, ಕರೀನಾ ಕಪೂರ್ ಗೆ ಸಂಕಷ್ಟ ಎದುರಾಗಿದೆ‌.‌

ಅಷ್ಟಕ್ಕೂ ಕರೀನಾ ಕಪೂರ್ ವಿರುದ್ಧ ದೂರು ನೀಡಲು ಕಾರಣ ಏನು ಅಂಥ ನೋಡುವುದಾದರೆ. ಇತ್ತೀಚೆಗಷ್ಟೆ ಎರಡನೇ ಮಗುವಿಗೆ ತಾಯಿಯಾದ ನಟಿ ಕರೀನಾ ಕಪೂರ್, ಗರ್ಭಿಣಿ ಆಗಿದ್ದಾಗಿನ ಅನುಭವಗಳು, ತಾಯಿಯಾಗುವ ಮಹತ್ವ ಮುಂಜಾಗ್ರತಾ ಕ್ರಮ ಹೀಗೆ ಹತ್ತು ಹಲವಾರು ವಿಷಯಗಳ ಕುರಿತು ಪುಸ್ತಕ ಒಂದನ್ನು ಬರೆದು,  ಅದಕ್ಕೆ ‘ಕರೀನಾ ಕಪೂರ್ ಖಾನ್‌’ಸ್ ಪ್ರೆಗ್ನೆನ್ಸಿ ಬೈಬಲ್’ ಎಂದು ಹೆಸರಿಟ್ಟಿದ್ದರು.

ಈ ಹೆಸರು ಕೆಲವರಿಗೆ ಇಷ್ಟವಾಗಿಲ್ಲ. ಇದೇ ಕಾರಣಕ್ಕಾಗಿ  ಮಹಾರಾಷ್ಟ್ರದ ಬಿಡೆಯಲ್ಲಿನ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಘದ ಸದಸ್ಯರು ಕರೀನಾ ಕಪೂರ್ ವಿರುದ್ಧ ದೂರು‌ ನೀಡಿದ್ದಾರೆ. ಮಹಾರಾಷ್ಟ್ರದ ಮುಂಬೈನ ನಗರದ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply