ಬೆಂಗಳೂರು- ಸಿನಿಮಾ ವಿಚಾರಕ್ಕೆ ಸುದ್ದಿಯಾಗುವುದು ಸಾಮಾನ್ಯ ಆದರೆ ಇತ್ತೀಚೇಗೆ ಕೆಟ್ಟ ವಿಷಯಗಳಿಗೆ ನಟಿ-ಮನಿಯರು ಸುದ್ದಿಯಾಗುತ್ತಿದ್ದಾರೆ. ಯುವರಾಜ್ ಖಾತೆಯಿಂದ ರಾಧಿಕಾ ಖಾತೆಗೆ ಜಮೆಯಾಗಿರುವ ಹಣದ ಬಗ್ಗೆ ವಿಚಾರಣೆಗಾಗಿ , ರಾಧಿಕಾ ಕುಮಾರಸ್ವಾಮಿ ಅವರನ್ನು ಶುಕ್ರವಾರ ಬೆಳ್ಳಿಗ್ಗೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಕೋರಿ ಸಿಸಿಬಿ ಅವರು ನೋಟಿಸ್ ಜಾರಿ ಮಾಡಿದ್ದಾರೆ.

ರಾಧಿಕಾ ಮಾಡಿರುವುದು ಬೆರಳೆನಿಕೆಯ ಸಿನಿಮಾ , ಅವುಗಳಲ್ಲಿ ಹಿಟ್ ಆಗಿರುವುದು ಕೆಲವೇ ಕೆಲವು ಹಾಗಿರುವಾಗ ರಾಧಿಕಾ 75 ಲಕ್ಷ ಸಂಭಾವಣೆ ಪಡೆಯುತ್ತಾರಾ, ಎನ್ನುವುದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಡೆಟ್ಸ ಬೇಕೆಂದು ಮುಂಚಿತವಾಗಿಯೇ ಅವರಿಗೆ ಹಣ ಕೊಟ್ಟು ಬುಕ್ ಮಾಡುವಷ್ಟರ ಮಟ್ಟಿಗೆ ರಾಧಿಕಾ ಬ್ಯೂಜಿ ಆಗಿದ್ದರಾ ಎನ್ನುದು ಅನುಮಾನಕ್ಕೆ ಕಾರಣವಾಗಿದೆ.

ಪೋನೀನ್ ಆಡಿಯೋ  ಸಂಭಾಷನೆಯನ್ನು ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು, ಆಡಿಯೋ ಮತ್ತು ಖಾತೆಗೆ ಜಮೆ ಆಗಿರುವ ಹಣದ ವಿವರಣೆಯನ್ನು ರಾಧಿಕಾ ಅವರಿಂದ ಪಡೆಯಬಹುದು.  ಒಟ್ಟಿನಲ್ಲಿ ಸಿಸಿಬಿ ಅಧಿಕಾರಿಗಳು ಸ್ವೀಟಿ ಗೆ ಶಾಕ್ ನೀಡಿದ್ದಾರೆ, ವಿಚಾರಣೆಗೆ  ಹಾಜರಾಗಿ ಹೊರ ಬರುತ್ತಾರಾ, ಇಲ್ಲವೇ ಲಾಕ್ ಆಗುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.

About Author

Priya Bot

Leave A Reply