ದೆಹಲಿ- ಬಹು ನಿರೀಕ್ಷಿತ 2021-22 ಬಜೆಟ್  ಮಂಡನೆಯಾಗಿದ್ದು. ಬಜೆಟ್ ಮಂಡನೆ ಮಾಡಿದ ನಿರ್ಮಾಲಾ ಸೀತಾರಾಮನ್ ಅವರು ವಾಹನ ಮಾಲೀಕರಿಗೆ ಶಾಕ್  ನೀಡಿದ್ದಾರೆ. ಮಾಲಿನ್ಯ ನಿಯಂತ್ರಣ ಮಾಡುವ ಉದ್ದೇಶದಿಂದಾಗಿ ಹಳೆಯ ವಾಹನಗಳ ಗುಜರಿಗೆ ಹಾಕಲು ಯೋಜನೆ ರೂಪಿಸಿದ್ದಾರೆ. ಬಜೆಟ್ ಮಂಡನೆ ವೇಳೆ, ಮಾಲಿನ್ಯ ನಿಯಂತ್ರಣಕ್ಕಾಗಿ ಸ್ವಯಂ ಪ್ರೇರಿತವಾಗಿ 15 ವರ್ಷ ಹಳೆಯ ಪ್ರವಾಸಿ  ವಾಹನಗಳನ್ನು ಗುಜರಿಗೆ ಹಾಕುವಂತೆ ಸೂಚನೆ ನೀಡಿದ್ದಾರೆ.

ಈಗಾಗಲೇ ಹಳೆಯ ವಾಹನ ಸವಾರರಿಗೆ  ಗ್ರೀನ್ ಟ್ಯಾಕ್ಸ್ ತೆರಿಗೆ ಪರಿಚಯಿಸಿ ಕೇಂದ್ರ ಸರ್ಕಾರ ಶಾಕ್ ನೀಡಿತ್ತು. ಇದೀಗ ಕೇಂದ್ರ ಬಜೆಟ್ ವೇಳೆಯಲ್ಲಿ 15 ವರ್ಷದ ಹಳೆಯ ವಾಹನಗಳನ್ನು ಸ್ವಯಂ ಪ್ರೇರಿತವಾಗಿ ಗುಜರಿಗೆ ಹಾಕಲು ಸೂಚನೆ ನೀಡಿದ್ದಾರೆ. ಇನ್ನು ವಾಯು ಮಾಲಿನ್ಯ ತಡೆಗಟ್ಟುವ ಸಲುವಾಗಿ ಗುಜರಿಗೆ ವಾಹನ ಸವಾರರೇ ಹಾಕುವ ಯೋಜನೆ ರೂಪಿಸಿದ್ದಾರೆ. ಇನ್ನು ವಾಣಿಜ್ಯ ವಹಿವಾಟು ವಾಹನಗಳಾದ ಟ್ರಕ್ ಲಾರಿಗಳಿಗೆ  ಐದು ವರ್ಷ ವಿನಾಯತಿ ನೀಡಿದ್ದು ಟ್ರಕ್ ಲಾರಿ ಗಳು 20 ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕುವಂತೆ ಸೂಚನೆ ನೀಡಿದ್ದಾರೆ….

About Author

Priya Bot

Leave A Reply