ಚಿಕ್ಕಮಗಳೂರು – ಅಪ್ರಾಪ್ತ ಬಾಲಕಿಯ ಮೇಲೆ ಕಳೆದ ಐದು ತಿಂಗಳಿಂದ ನಿರಂತರವಾಗಿ ಸುಮಾರು 30ಕ್ಕೂ ಹೆಚ್ಚು ಜನ ಅತ್ಯಾಚಾರವೆಸಗಿರೋ ಆಘಾತಕಾರಿ ಪ್ರಕರಣವೊಂದು ಚಿಕ್ಕಮಗಳೂರು ಶೃಂಗೇರಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿದೆ.

ಮೂಲತ ಹಾವೇರಿ ಜಿಲ್ಲೆಯ ಈ ಬಾಲಕಿ ತಾಯಿಯನ್ನು ‌ಕಳೆದುಕೊಂಡ ನತದೃಷ್ಠೆ. ಹಾವೇರಿ ಜಿಲ್ಲೆಯ ಈ ಬಾಲಕಿಯ ತಾಯಿ ತೀರೊಹೋದ ಮೇಲೆ ಅವಳ ತಂದೆ ಬೇರೊಂದು ಮದುವೆ ಆಗಿದ್ದಾನೆ. ಹೀಗಾಗಿ ಬಾಲಕಿ ತಮ್ಮ ಚಿಕ್ಕಮ್ಮನ ಬಳಿ ಆಶ್ರಯ ಪಡೆದಿದ್ದಾಳೆ. ಬಾಲಕಿಯ ಚಿಕ್ಕಮ್ಮಾ , ಕಲ್ಲಯ ಕ್ವಾರಿಯಲ್ಲಿ ಕೆಲಸ‌ಮಾಡುತಿದ್ದು, ಬಾಲಕಿ ಸಹ ಕ್ವಾರಿ ಕೆಲಸಕ್ಕೆ‌ ಹೋಗಿದ್ದಾಳೆ. ಅಲ್ಲಿ ಕಲೆಸ ಮಾಡುವ ಯುವಕನೊಬ್ಬ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದು, ಅತ್ಯಾಚಾರ ಮಾಡಿದ ವಿಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಮೊಬೈಲ್ ನಲ್ಲಿ ಸೆರೆಹಿಡಿದ ವಿಡಿಯೋ ಯೋರಿಸಿ ಬಾಲಕಿಯನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾನೆ. ಇದಕ್ಕೆ ವಿರೋಧ ಮಾಡಿದ ಬಾಲಕಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದಾಗಿ ಹೇಳಿ ನಿರಂತರವಾಗಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ತನ್ನ ಸ್ನೇಹಿತರಿಗೂ ವಿಷಯ ತಿಳಿಸಿ ಅವರು ಸಹ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದಾರೆ. ವಿಷಯ ತಿಳಿದ ಪಾಲಕರು ಮಕ್ಕಳ ಕಲ್ಯಾಣ ಮತ್ತು ಅಭಿವೃದ್ಧಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಜೋಡಿದ ದೂರಿನ ಹಿನ್ನೆಲೆಯಲ್ಲಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ 17 ಜನರ ಮೇಲೆ  ಪ್ರಕರಣ ದಾಖಲಾಗಿದೆ.

About Author

Priya Bot

Leave A Reply