ಧಾರವಾಡ- ರಾಮ ಮಂದಿರ ನಿರ್ಮಾಣಕ್ಕೆ ದೇಶದೆಲ್ಲೆಡೆ ದೇಣಿಗೆ ಸಂಗ್ರಹ ಕಾರ್ಯ ನಡೆಯುತ್ತಿದೆ. ಅದೇ ರೀತಿ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಇಂದು ಶ್ರೀ ರಾಮ ಮಂದಿರ ಸಮರ್ಪಣಾ ನಿಧಿಗೆ ದೇಣಿಗೆ ಸಂಗ್ರಹವನ್ನು ಗ್ರಾಮದ ಯುವಕರು ಪ್ರಾರಂಭಿಸಿದ್ದರು.

ಕಳೆದ ಒಂದು ವರ್ಷದಿಂದ ಅಪ್ಪ ಅಮ್ಮ ಸೇರಿದಂತೆ ಪೋಷಕರು ನೀಡಿದ್ದ ಹಣವನ್ನು ಹುಂಡಿಯಲ್ಲಿ ಸಂಗ್ರಹಿಸಿದ್ದ ಪುಟ್ಟ ಮಕ್ಕಳು ಮನೆಯಲ್ಲಿ ಅವರ ತಂದೆ ದೇಣಿಗೆ ನೀಡುವುದನ್ನು ನೋಡಿ ತಾವು ಸಂಗ್ರಹಿಸಿಟ್ಟ ಹುಂಡಿಯ ಹಣವನ್ನು ಶ್ರೀ ರಾಮ ಮಂದಿರಕ್ಕೆ ದೇಣಿಗೆ ನೀಡುವ ಮೂಲಕ ದೇವರ ಕೃಪೆಗೆ ಪಾತ್ರರಾಗಿದ್ದಾರೆ.

About Author

Priya Bot

Leave A Reply