ನವದೆಹಲಿ- ಕುತಂತ್ರಿ ಚೀನಾ ಇಷ್ಟು ದಿನ ನಮ್ಮ ದೇಶದ  ಸೈಬರ್ ಗಳ ಮೇಲೆ ದಾಳಿ ಮಾಡಿ ಮಾಹಿತಿ ಕದ್ದು ಇಲ್ಲವೇ ತಿರುಚುವ ಕೆಲಸ ಮಾಡುತಿತ್ತು. ಆದ್ರೆ ಈಗ ಲ್ಯಾನ್ ಮೇಲು ದಾಳಿ ಮಾಡಿರುವ ಆಘಾತಕಾರಿ ಅಂಶ ಹೊರ ಬಿದ್ದಿದೆ. ಗಡಿ ವಿಚಾರದಲ್ಲಿ  ಜಗಳ ತೆಗೆಯುತ್ತಲೇ ಬಂದಿರುವ ಚೀನ ಈಗ  ಭಾರತೀಯ ಅಂತರ್ಜಾಲ ಮತ್ತು ಇಲಾಖಾ ಮಟ್ಟದ ಲ್ಯಾನ್‌ (ಲೋಕಲ್‌ ಏರಿಯಾ ನೆಟ್‌ವರ್ಕ್‌) ವ್ಯವಸ್ಥೆಗಳ ಮೇಲೂ ಸೈಬರ್‌ ದಾಳಿ ನಡೆಸಿದೆ  ಎಂಬ ನ್ಯೂಯಾರ್ಕ್‌ ಟೈಮ್ಸ್‌ ವರದಿ ಮಾಡಿದೆ.

ದೇಶದ ವಾಣಿಜ್ಯ ನಗರಿ‌ ಮುಂಬೈನಲ್ಲಿ
ಕಳೆದ ವರ್ಷ ಅ. 12ರಂದು ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಒಂದು ದಿನದ ಮಟ್ಟಿಗೆ ಬಹುತೇಕ ಮುಂಬೈ ಕತ್ತಲಲ್ಲಿ ಇತ್ತು. ಇದಕ್ಕೆ ಕಾರಣ ಲೋಕಲ್ ನೆಟವರ್ಕ್ ನಲ್ಲಿ ಉಂಟಾದ ಸಮಸ್ಯೆ ಎಂದು ಭಾವಿಸಲಾಗಿತ್ತು. ಆದರೆ ಇದನ್ನು ಚೀನಾ ದೇಶದ ಹ್ಯಾಕರ್ಸ್ ಹ್ಯಾಕ್ ಮಾಡಿದ್ದಾರೆ ಎನ್ನುವ ಆಘಾತಕಾರಿ ಅಂಶವನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಕಳೆದ ವರ್ಷ ಅ – 12 ರಂದು  ಮುಂಬಯಿಯಲ್ಲಿ ಭಾರೀ ಮಟ್ಟದ ವಿದ್ಯುತ್‌ ವ್ಯತ್ಯಯ ಉಂಟಾಗಿತ್ತು. ಬೆಳಗ್ಗೆ 10ಕ್ಕೆ ವಿದ್ಯುತ್‌ ನಿಲುಗಡೆಯಾಗಿ ಜನರಿಗೆ ತೀವ್ರ ತೊಂದರೆಯಾಗಿತ್ತು. ಅನಂತರ ಮಹಾರಾಷ್ಟ್ರ ವಿದ್ಯುತ್‌ ಇಲಾಖೆಯ ಅಧಿಕಾರಿಗಳು, ತಂತ್ರಜ್ಞರು ಅವಿರತವಾಗಿ ಶ್ರಮಿಸಿ, ಸಮಸ್ಯೆಯನ್ನು ಸರಿಪಡಿಸಿದ್ದರು. ಆದ್ರೆ ಈಗ ಈ ಆಘಾತಕಾರಿ ಅಂಶ ಹೊರಬಿದ್ದಿದೆ‌..

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

 

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply