CITU ಕಾರ್ಮಿಕ ಸಂಘಟನೆಯ 51 ನೇ ಸಂಸ್ಥಾಪನಾ ದಿನಾಚರಣೆ

0

CITU ಕಾರ್ಮಿಕ ಸಂಘಟನೆಯ 51 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ದಿನಾಂಕ 30.05.2021 ರಂದು ಬೆಳಿಗ್ಗೆ 9.30ಕ್ಕೆ ತೋರಣಗಲ್ಲು ಗ್ರಾಮದ CITU ಕಚೇರಿ ಕಾಮ್ರೇಡ್ ಸೂರ್ಯನಾರಾಯಣ ರಾವ್ ಭವನ ಮುಂದೆ ತಾಲೂಕು ಸಮಿತಿ ಸಂಚಾಲಕ ಜೆ. ಎಮ್. ಚನ್ನಬಸಯ್ಯ ನೆರವೇರಿಸಿದರು. ಸಿಐಟಿಯು ಕಾರ್ಮಿಕ ಸಂಘಟನೆಯು ಬೆಳೆದು ಬಂದ ಬಗ್ಗೆ ವಿವರಿಸಿದರು. ಕಾರ್ಮಿಕರು ಹೋರಾಟ, ತ್ಯಾಗ ಬಲಿದಾನದಿಂದ ಪಡೆದ ಕಾನೂನುಗಳನ್ನು ತಿದ್ದುಪಡಿ ಮಾಡುವ ಮೂಲಕ ಅವರ ಮೂಲಭೂತ ಹಕ್ಕು ಗಳನ್ನು ಕಿತ್ತಿ ಕೊಳ್ಳುಲಾಗುತ್ತದೆ. ಕರೋನಾ ಸಂದರ್ಭದಲ್ಲಿ ಉದ್ಯೋಗಗಳ ಕಡಿತ, ನೇಮಕಾತಿ ನಿರ್ಬಂಧ ಕ್ರಮಗಳು ನಿರುದ್ಯೋಗ ಹೆಚ್ಚಳವಾಗಿದ್ದು ಸಂಕಷ್ಟಗಳು ಉಲ್ಬಣಗೊಳ್ಳುತ್ತಿದೆ. ಅಸಂಘಟಿತ ಕಾರ್ಮಿಕರ ಬದುಕಿನ ದುಡಿಮೆ ಪೆಟ್ಟು ಬಿದ್ದಿದೆ. ಸರಕಾರಗಳ ಕಾರ್ಮಿಕ ವಿರೋಧಿ ನೀತಿ ವಿರುದ್ಧ ಐಕ್ಯ ಹೋರಾಟಕ್ಕೆ ಕರೆ ನೀಡಿದರು. ಕಟ್ಟಡ ನಿರ್ಮಾಣ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷರಾದ ವಿ. ದೇವಣ್ಣ, ಹೊನ್ನುರಪ್ಪ, ಹಮಾಲಿ ಸಂಘದ ಯು. ತಿಪ್ಪೇಸ್ವಾಮಿ, ಸಿಪಿಐ ಎಂ ಕಾರ್ಯದರ್ಶಿ ಎ. ಸ್ವಾಮಿ, ಡಿವೈಎಫ್ ಐ ಜಿಲ್ಲಾ ಸಹ ಕಾರ್ಯದರ್ಶಿ ಎನ್. ಈರಣ್ಣ, ವಿಭಾಕುಮಾರಿ, ಶಿವರೆಡ್ಡಿ, ಅಂಗನವಾಡಿ ಸಂಘಟನೆಯ ತಿಮ್ಮಕ್ಕ, ಪ್ರತಿಭಾ, ಭಾಗವಹಿಸಿದ್ದರು.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply