ಸಿಎಂ ಬದಲಾವಣೆ ಬಹುತೇಕ ಫಿಕ್ಸ್  : ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

0

ವಿಜಯಪುರ

ಎಂಬಿ ಪಾಟೀಲರು ಶಾಮನೂರು ಶಿವಶಂಕರಪ್ಪನವರಿಗೆ  ಬಿಜೆಪಿಯ ಆಂತರಿಕ ವಿಷಯವಾಗಿ  ಯಡಿಯೂರಪ್ಪನವರ ಪರವಾಗಿ  ಮಾತನಾಡುವ ಅವಶ್ಯಕತೆ ಇಲ್ಲ, ತಮ್ಮ ಪಕ್ಷದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದವರು ಜೈಲಿಗೆ ಹೋದವರ  ಚರಿತ್ರೆ ಬಗ್ಗೆ ಚಿಂತನೆ ಮಾಡಲಿ.  ಬಿಜೆಪಿಯಲ್ಲಿ ಸಾಕಷ್ಟು ಸಮರ್ಥರಿದ್ದಾರೆ  ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವೀರಶೈವ ಲಿಂಗಾಯತರ  ನಮ್ಮ ಸಮುದಾಯವನ್ನು ಯಾವುದೇ ಜಾತಿ ಮೇಲೆ ಒಬ್ಬ ಲೀಡರ್ ನನ್ನು ಕರೆದು ಮಾಡಲು ಆಗುವುದಿಲ್ಲ.  ನಮ್ಮ ಸಮುದಾಯದಿಂದ ವೀರೇಂದ್ರ ಪಾಟೀಲ್ ಜೆಎಚ್ ಪಟೇಲ್ ಎಸ್ ನಿಜಲಿಂಗಪ್ಪನವರ ಇದ್ದರು,  ಯಾರ ಮೇಲೂ ಕೂಡ ಭ್ರಷ್ಟಾಚಾರ ಆರೋಪಗಳಿಂದ ಕೂಡ ಕುಟುಂಬ ರಾಜಕಾರಣ ಮಾಡಿಲ್ಲ.  ಈಗಿನವರು ತಮ್ಮ ಮನೆಯ ಎಲ್ಲರನ್ನೂ  ಒಬ್ಬರನ್ನು ಎಂಎಲ್ಎ ಎಂಪಿ,  ಒಬ್ಬರನ್ನು ಕೇಂದ್ರ ಮಂತ್ರಿಯನ್ನಾಗಿ ಮಾಡುತ್ತಾರೆ,  ಪಕ್ಷಕ್ಕೆ ಯಾರು ಹೇಳುವವರು ಕೇಳುವವರು ಇಲ್ಲವೇ?  ಪ್ರಧಾನಿ ನರೇಂದ್ರ ಮೋದಿಯವರು ಕುಟುಂಬ ರಾಜಕಾರಣ ಮಾಡಿಲ್ಲ ಅವರ ತಾಯಿಯವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾರೆ ಆಟೋದಲ್ಲಿ ಓಡಾಡುತ್ತಾರೆ, ದೇಶದಲ್ಲಿ ಆದರ್ಶ ಪ್ರಧಾನಮಂತ್ರಿ ಗಳಿದ್ದಾರೆ. ಕೂಡ ಆದರ್ಶ ಮುಖ್ಯಮಂತ್ರಿ ಕೊಡಬೇಕೆಂಬುದು  ಬಿಜೆಪಿಯ ವಿಚಾರವಿರಬಹುದು.

ಕಾಂಗ್ರೆಸ್ನ ಲಿಂಗಾಯತ ನಾಯಕರು ದಿವಾಳಿಯಾಗಿದ್ದಾರೆ, ಅವರಿಗೆ ಯಾವುದೇ ಕಿಮ್ಮತ್ತಿಲ್ಲ, ಒಬ್ಬರು ಮಂತ್ರಿ ಆಗಬೇಕಾದರೆ  ಸೋನಿಯಾ ಗಾಂಧಿ ಅವರ ಕಾಲು ಹಿಡಿದು ಮಂತ್ರಿಯಾಗುತ್ತಾರೆ, ತಾಕತ್ತಿದ್ದರೆ ಲಿಂಗಾಯತರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಲಿ ಎಂದು  ಬಸನಗೌಡ ಪಾಟೀಲ್ ಯತ್ನಾಳ ಸವಾಲ್ ಹಾಕಿದ್ದಾರೆ.

ಶಾಮನೂರು ಶಿವಶಂಕರಪ್ಪನವರಿಗೆ ಅಥವಾ ಲಿಂಗಾಯತ ಧರ್ಮದ ಸ್ಥಾಪಕರಾದ ಎಂಬಿ ಪಾಟೀಲರನ್ನಾದರು ಮಾಡಲಿ. ಸುಮ್ಮನೆ ಯಡಿಯೂರಪ್ಪನವರ ಬಗ್ಗೆ  ಶಾಮನೂರು ಶಿವಶಂಕರಪ್ಪನವರಿಗೆ ಕಾಳಜಿ ಉಕ್ಕಿ ಹರಿಯಲು ಕಾರಣವೇನು.   ಅಖಿಲ ಭಾರತ ವೀರಶೈವ ಮಹಾಸಭಾ  ಎಂದು ಕೂಡ ಇಡೀ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ,  ಅದು ಪ್ರೈವೇಟ್ ಲಿಮಿಟೆಡ್ ಕಂಪನಿ,  ಬಾಕಿ ಶಾಮನೂರು ಶಿವಶಂಕರಪ್ಪ ಈಶ್ವರ ಖಂಡ್ರೆ ಇತ್ತೀಚಿಗೆ ಹೊಸದಾಗಿ  ಯಡಿಯೂರಪ್ಪನವರ ಮಗಳು  ಮೂರು ಜನರ ಪ್ರೈವೇಟ್ ಲಿಮಿಟೆಡ್, ಯಡಿಯೂರಪ್ಪ ರವರು ಬದಲಾಯಿಸಿದರೆ ಬಿಜೆಪಿ ಹಾಳಾಗುತ್ತದೆ ಹೇಳಲು ನ್ಯೂ ಯಾರು ,  ವೀರಶೈವ ಮಹಾಸಭಾ  ಕೋಟಾದಡಿ  ನಾವು ಲಿಂಗಾಯಿತ ಲೀಡರ್ ಗಳು ಎಂದು ಹೇಳಿ ಸೋನಿಯಾಗಾಂಧಿಯವರ ಕಾಲು ಹಿಡಿದು ಮಂತ್ರಿಯಾಗಲು  ಉಪಯೋಗ ಪಡೆದಿದ್ದಾರೆ ಹೊರತು,  ವೀರಶೈವ ಮಹಾಸಭಾಕ್ಕೆ ಶಾಮನೂರು ಶಿವಶಂಕರಪ್ಪನವರು ಕಾಣಿಕೆ ಏನು ಇಲ್ಲ,  ವೀರಶೈವ ಮಹಾಸಭೆ ಯಿಂದ ಲಿಂಗಾಯಿತ ಸಮುದಾಯಕ್ಕೆ ಯಾವುದೇ ಲಾಭವಾಗಿಲ್ಲ,  ಇವರಿಗೆ ಯೂರಪ್ಪನವರ ಪರವಾಗಿ ಬಿಜೆಪಿ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.

ನಿಮ್ಮ ಪಕ್ಷದ ತಟ್ಟೆಯಲ್ಲಿ ಕತ್ತೆ ಬಿದ್ದಿದೆ ಬಿಜೆಪಿ ತಟ್ಟೆಯಲ್ಲಿ ಬಿದ್ದ ನೋಣದ ಬಗ್ಗೆ ಯಾಕೆ ಮಾತನಾಡುತ್ತೀರಿ.  ನಾಯಕನ ಬದಲಾವಣೆ ಅಧಿಕಾರ-ನಮ್ಮ ರಾಷ್ಟ್ರನಾಯಕರಿಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಇದೆ ಮುಂದಿನ ಎರಡು ವರ್ಷದ ಅವಧಿಗೆ ಬಿಜೆಪಿಯಲ್ಲಿ ಒಬ್ಬ ಒಳ್ಳೆಯ, ಪ್ರಾಮಾಣಿಕ,  ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತಹವರಿಗೆ ನಾಯಕತ್ವ  ಕೊಡಬೇಕೆಂಬುದು  ಪಕ್ಷದ  ನಿರ್ಣಯವಾಗಿದೆ ಎಂದು  ವಿಜಯಪುರದಲ್ಲಿ  ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply