ತುಮಕೂರು- ಇತ್ತೀಚಿನ ದಿನಗಳಲ್ಲಿ ಸಿದ್ದಾರಾಮಯ್ಯ ಸೋಲಿನ ಭಯದಿಂದ ವರುಣಾ ಕ್ಷೇ ಬಿಟ್ಟು ಬದಾಮಿ ಸೇರಿಕೊಂಡರು ಈಗಾ ಆ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದ ಹುಡುಕಾಟದಲ್ಲಿ ಇದ್ದಾರೆ ಎಂದು ಕೆಲ ಬಿಜೆಪಿ ನಾಯಕರು ಲೇವಡಿ ಮಾಡಿದ್ದಾರೆ. ‌ಬಿಜೆಪಿ ಅವರು ಆಡಿದ ಮಾತಿಗೆ ಈಗ ಮತ್ತಷ್ಟು ಪುಷ್ಟಿ ಬಂದಿದೆ. ಕಾರಣ ಸಿದ್ದರಾಮಯ್ಯಾ ಅವರು  ಚಿಕ್ಕನಾಯಕನಹಳ್ಳಿ ಇಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ತುಮಕೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಈ ಕುರಿತು ತುಮಕೂರಿನಲ್ಲಿ ಮಾದ್ಯಮಗಳ ಪ್ರತಿನಿಧಿಗಳ ಜೊತೆಯಲ್ಲಿ ಮಾತನಾಡಿದ ಅವರು  ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಚಿಕ್ಕನಾಯಕನಹಳ್ಳಿ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ, ಈ ಬಗ್ಗೆ ನಾನು ವೈಯಕ್ತಿಕವಾಗಿ ಸಿದ್ದರಾಮಯ್ಯ ನವರನ್ನು ಕೇಳಿಕೊಂಡಿದ್ದೆನೆ, ಅವರು ಸಕಾರಾತ್ಮಕಾಗಿ ಸ್ಪಂಧಿಸುವ ಸಾಧ್ಯತೆ ಇದೆ

ಈಗಲೇ ನಿರ್ಧಾರ ಪ್ರಕಟ ಮಾಡಿದರೆ ಬಾದಾಮಿ ಮತದಾರರು ಬೇಜಾರಾಗುತ್ತಾರೆ. ಹಾಗಾಗಿ ಅವರು ಯಾವ ನಿರ್ಧಾರನೂ ಪ್ರಕಟ ಮಾಡುತಿಲ್ಲ ಎಂದಿದ್ದಾರೆ.‌ ಇನ್ನು  ಸಿದ್ದರಾಮಯ್ಯ ಅವರು  ಬಂದರೆ ಕೇವಲ ತುಮಕೂರು ಅಷ್ಟೇ ಅಲ್ಲ ಪಕ್ಕದ ಜಿಲ್ಲೆ ಚಿತ್ರದುರ್ಗದಲ್ಲೂ ಕಾಂಗ್ರೆಸ್ ಬಲಗೊಳ್ಳಲಿದೆ, ಹಾಗಾಗಿ ಸಿದ್ದರಾಮಯ್ಯ ರಿಗೆ ಆಹ್ವಾನ ನೀಡಲಾಗಿದೆ, ಚಿಕ್ಕನಾಯಕನಹಳ್ಳಿ ಸಚಿವ ಮಾಧುಸ್ವಾಮಿ ತವರು ಕ್ಷೇತ್ರ ಕೂಡಾ ಆಗಿರುವುದು ಇಲ್ಲಿ ಗಮನಾರ್ಹ ವಿಷಯ…

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply