ಎಮ್ ಪಿ ವೀಣಾ ಮಹಾಂತೇಶ್ ಅವರಿಂದ ಮುಂದುವರೆದ ಸಮಾಜಮುಖಿ ಕಾರ್ಯ.

0

ವಿಜಯನಗರ- ಕಾಂಗ್ರೆಸ್ ಪಕ್ಷದ ನಾಯಕ  ರಾಹುಲ್ ಗಾಂದಧಿ ಅವರ  ಜನ್ಮದಿನಾಚರಣೆಯನ್ನು, ಎಮ್ ಪಿ ವೀಣಾ ಮಹಾಂತೇಶ್ ಅವರು ವಿಶೇಷವಾಗಿ ಆಚರಿಸಿದ್ದಾರೆ.  ಕಳೆದ ಎರಡುತಿಂಗಳಿಂದ ಕ್ಷೇತ್ರದಲ್ಲಿ ಲಾಕ್ ಡೌನ್ ನಿಂದಾಗಿ ಜನರು ಸಂಕಷ್ಟದಲ್ಲಿ ಇದ್ದು,  ಅವರ ಸಹಾಯಕ್ಕ ಎಂಪಿವೀಣಾ ಮಹಾಂತೇಶ್ ಸಹಾಯ ಹಸ್ತ ಚಾಚಿದ್ದಾರೆ. ಇನ್ನು ರಾಹುಲ್ ಗಾಂಧಿ ಅವರ ಜನ್ಮ ದಿನದ ಹಿನ್ನಯಲ್ಲಿ ಬಡವರಿಗೆ ಆಹರದ ಕಿಟ್ ವಿತರಿಸುವ ಮೂಲಕ ಹುಟ್ಟು ಹಬ್ಬವನ್ನುವಿಷೇಶವಾಗಿ ಆಚರಣೆ ಮಾಡಿದ್ದಾರೆ.

 ರಾಹುಲ್ ಗಾಂಧಿ ಅವರ ಜನ್ಮದಿನಾಚರಣೆಯನ್ನು ದೇಶದಾದ್ಯಂತ ಕಾಂಗ್ರೆಸ್ ಪಕ್ಷದ ಮುಖಂಡರು, ಅಭಿಮಾನಿಗಳು ಹಲವಾರು ರೀತಿಯಲ್ಲಿ ಆಚರಣೆ ಮಾಡಿ ಶುಭಾಶಯ ಕೋರಿದ್ದಾರೆ. ಹರಪನಹಳ್ಳಿಯ, ಎಂ.ಪಿ ಪ್ರಕಾಶ್ ಸಮಾಜಮುಖಿ ಟ್ರಸ್ಟ್ ನ ಅಧ್ಯಕ್ಷೆ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕಿ ಎಂಪಿವೀಣಾ_ಮಹಾಂತೇಶ್ ಅವರ ಮಾರ್ಗದರ್ಶನದ ಮೇರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರ ತಂಡ ಹರಪನಹಳ್ಳಿ ಪಟ್ಟಣದ ಹರಿಹರ ರಸ್ತೆಯಲ್ಲಿನ ಆದಿ ಬಸವೇಶ್ವರ ಬಡಾವಣೆಯ ನೊಂದ 100 ಬಡ ಕುಟುಂಬಗಳಿಗೆ ಉಚಿತ ಆಹಾರದ ಕಿಟ್ ವಿತರಿಸಿ ವಿಶಿಷ್ಟ ಹಾಗೂ ವಿಭಿನ್ನವಾಗಿ ಆಚರಿಸಿದರು.

ಬುಡ್ಗ ಬುಡಕಟ್ಟು ಜಂಗಮ ವೇದಿಕೆಯ ಮುಖ್ಯಸ್ಥರಾದ ಶ್ರೀ.ಸಣ್ಣ ಅಜ್ಜಯ್ಯನವರ ನೇತೃತ್ವದಲ್ಲಿ ಸೇರಿದ್ದ ಆಶ್ರಯ ಕಾಲೋನಿಯ 100 ಕುಟುಂಬದ ಸದಸ್ಯರಿಗೆ ಆಹಾರದ ಕಿಟ್ ವಿತರಿಸುವ ಮೂಲಕ ನಿಮ್ಮೊಂದಿಗೆ ಸದಾ ನಾವಿದ್ದೇವೆ‌. ಯಾವುದೇ ಕಾರಣಕ್ಕೂ ನಿರಾಶರಾಗಬೇಡಿ*ದೈರ್ಯದಿಂದ ಇರಿ ಎನ್ನುವ ಭರವಸೆಯನ್ನು ಮೂಡಿಸಿ ಮಾನವೀಯತೆ ಮೆರೆದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ  ದುಗ್ಗಾವತಿ ಶ್ರೀ ಸಿದ್ದಲಿಂಗನಗೌಡ ಶ್ರೀ ನಾಗರಾಜ್ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷರಾದ ದಾದಾಪೀರ್ ಮಕರಬ್ಬಿ ಹಾಗೂ ಹರಪನಹಳ್ಳಿ ಬ್ಲಾಕ್ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾದ ಮಂಜುನಾಥ್ ಸಿ ಶ್ರೀ ಮದ್ದಾನಸ್ವಾಮಿ ಶ್ರೀ ಗುರು ಮುಂತಾದವರಿದ್ದರು.  

ವಿಶೇಷವಾದ ಸುದ್ದಿಗಳಿಗಾಗಿ ನಮ್ಮ ಹೊಸದಾದ SUDDINOW APP ಡೌನ್ಲೋಡ್ ಮಾಡಿಕೊಳ್ಳಿ : https://play.google.com/store/apps/details?id=com.webapp.Suddinow

ಬರವಣಿಗೆ ಬಗ್ಗೆ ನಿಮಗೆ ಆಸಕ್ತಿ ಇದಿಯೇ, ನಾವು ನಿಮ್ಮನ್ನು ಪ್ರೋತಾಹಿಸಲು ನಿಮಗಾಗಿ CITIZEN JOURNALISM ಕಾಲಂಅನ್ನು ತೆರೆದಿದ್ದೇವೆ. ನಿಮ್ಮ ಬರಹಗಳಿಗೆ ಸ್ವಾಗತ : https://suddinow.com/upload-news-yourself/

About Author

Priya Rai

ನಮಸ್ಕಾರ, ಸುದ್ದಿನೌ ಪ್ರಾರಂಭವಾಗಿ ೪ ವರ್ಷಗಳು ಕಳೆದಿವೆ, ನಮ್ಮ ಜೊತೆಗಿರುವ ನಿಮ್ಮೆಲ್ಲರಿಗೂ ಧನ್ಯವಾದಗಳು ನಿಮ್ಮ ವಿಶ್ವಾಸಿ, ಪ್ರಿಯ ರಾಯ್

Leave A Reply