ಬಳ್ಳಾರಿ- ಸರ್ಕಾರ ಶಾಲೆ ಆರಂಭಿಸಿದ ಬಳಿಕ ಶಿಕ್ಷಕರಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಗಣಿ ಜಿಲ್ಲೆಯ ಶಿಕ್ಷಕರಿಗೂ ಕರೊನಾ ಬಿಸಿ ತಟ್ಟಿದೆ. ಬಳ್ಳಾರಿ ಜಿಲ್ಲೆಯ ಐವರು ಶಿಕ್ಷಕರಿಗೆ ಕರೊನಾ ಸೋಂಕು ಧೃಢ ಪಟ್ಡಿದೆ. ಹೋಸಪೇಟೆ- 02, ಸಂಡೂರು- 01, ಮತ್ತು ಕೂಡ್ಲಿಗಿ – 02 ಶಿಕ್ಷಕರಿಗೆ ಸೋಂಕು ತಗುಲಿದೆ. ನಾಲ್ವರು ಶಿಕ್ಷಕರಿಗೆ ಕರೊನಾ ಸೋಂಕಿನ ಗುಣಲಕ್ಷಣ ಕಾಣಿಸಿಕೊಂಡ ಹಿನ್ನಲೆ ಶಾಲೆಗೆ ಆಗಮಿಸಿಲ್ಲ. ಓರ್ವ ಶಿಕ್ಷಕ ಮಾತ್ರ ಕೂಡ್ಲಿಗಿಯ ಶಾಲೆಗೆ ಒಂದು ದಿನ ಬಂದು ಪಾಠ ಮಾಡಿದ್ದರಿಂದ ಶಾಲೆಯನ್ನು ಬಂದ್ ಗೊಳಿಸಿ ವಿದ್ಯಾರ್ಥಿಗಳಿಗೂ ಟೆಸ್ಟ್ ಮಾಡಲಾಗುತ್ತಿದೆ. ಶಾಲೆಯನ್ನ ಸ್ಯಾನಿಟೈಸ್ ಮಾಡಲಾಗಿದೆ ಎಂದು ಬಳ್ಳಾರಿ ಡಿಡಿಪಿಐ ಸಿ.ರಾಮಪ್ಪ ಮಾಹಿತಿ ನೀಡಿದ್ದಾರೆ.

suddinow.com
suddinow.com