ಬಳ್ಳಾರಿ- ಬಳ್ಳಾರಿಯಲ್ಲಿ‌ ಕರೊನಾ ಲಸಿಕೆ ಹಂಚಿಕೆಗೆ ಅಂತಿಮ ಹಂತದ ತಯಾರಿ ಮಾಡಲಾಗುತ್ತಿದೆ. ಶೀಘ್ರದಲ್ಲಿಯೇ ಬಳ್ಳಾರಿಗೆ  ವ್ಯಾಕ್ಸಿನ್ ಬರುವ ಸಾಧ್ಯತೆಯಿದ್ದು, ಮೊದಲ ಹಂತದಲ್ಲಿ 13608 ಕರೊನಾ ವಾರಿಯರ್ಸಗೆ ವ್ಯಾಕ್ಸಿನ್ ನೀಡಲಾಗುವುದು. ಮೊದಲ ಹಂತ ಮುಗಿದ ಬಳಿಕ ಸಾರ್ವಜನಿಕರಿಗೆ ನೀಡಲಾಗುವುದು. ದಿನಕ್ಕೆ 100 ಜನರಿಗೆ ಕರೊನಾ ವ್ಯಾಕ್ಸಿನ್ ನೀಡಲು ಬಳ್ಳಾರಿ ಜಿಲ್ಲಾಡಳಿತ ಚಿಂತನೆ ನಡೆಸಿದ್ದು, ವ್ಯಾಕ್ಸಿನ್ ನೀಡೋದಕ್ಕಾಗಿಯೇ 114 ವ್ಯಾಕ್ಸಿನೇಷನ್ ಸೆಂಟರ್ ಓಪನ್ ಮಾಡಲಾಗಿದೆ. ಪ್ರತಿಯೊಂದು ವ್ಯಾಕ್ಸಿನೇಷನ್ ಸೆಂಟರ್ ನಲ್ಲಿ 4 ಸಿಬ್ಬಂದಿ ಇರ್ತಾರೆ. ಅಲ್ಲದೇ ಯಾರಿಗೆ ಆ ಸಮಯದಲ್ಲಿ ಸೈಡ್ ಎಫೆಕ್ಟ್ ಕಂಡು ಬಂದರೂ ಕೂಡ ಅಬ್ಸರ್ವ ಮಾಡಲು ಅಬ್ಸರವೇಷನ್ ಕೊಠಡಿ ಸಹ ಇಡಲಾಗಿದೆ. ಮೊದಲ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮೂಲಕ ವ್ಯಾಕ್ಸಿನ್ ನೀಡಲಾಗುತ್ತದೆ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಮಾಹಿತಿ ನೀಡಿದ್ದಾರೆ.

Leave A Reply