ನವದೆಹಲಿ- ಮಹಾ ಮಾರಿ ಕರೋನಾ ತನ್ನ ವಿರಾಟ ರೂಪ ತೋರಿಸುತ್ತಿದ್ದು, ದೇಶದಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಇನ್ನು ಭಾರತಕ್ಕೆ ಕರೋನಾ ಕಾಲಿಟ್ಟು ಸುಮಾರು 14 ತಿಂಗಳ ಕಾಲ ಕಳೆದಿವೆ. ಆದ್ರೆ ಈ ವರೆಗೂ ನಿನ್ನೆ ದಾಖಲಾದಷ್ಟು ಕರೋನಾ ಕೇಸ್ ಗಳು ಯಾವಗಲೂ ದಾಖಲಾಗಿರಲಿಲ್ಲಾ. ನಿನ್ನೆ ಒಂದೇ ದಿನ 1,03,558 ಜನರಿಗೆ ಸೋಂಕು ತಗುಲಿದೆ. ಇದೇ 14 ತಿಂಗಳ ಗರಿಷ್ಟ ಪ್ರಮಾಣದ ಸೋಂಕಿತರು ಒಂದೆ ದಿನ ದಾಖಲಾಗಿರುವ ಹೊಸ ದಾಖಲೆ. ಈ ಹಿಂದೆ ಲಾಕ್ ಡೌನ್ ಸಮಯದಲ್ಲಿ ಹಾಗೂ ಸೋಂಕಿತರು ಹೆಚ್ಚಿನ ಪ್ರಮಾಣದಲ್ಲಿ ಇರುವಾಗಲೇ ಇಷ್ಟೊಂದು ಪ್ರಮಾಣದಲ್ಲಿ ಸೋಂಕು ಪತ್ಯೆಯಾಗಿರಲಿಲ್ಲಾ. ಆದ್ರೆ ಈಗ ಒಂದೇ ದಿನ ಒಂದು ಲಕ್ಷಕ್ಕೂ ಅಧಿಕಾ ಪ್ರಮಾಣದಲ್ಲಿ ಸೋಂಕಿ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೆ ಎಡೆಮಾಡಿಕೊಟ್ಟಿದೆ…